ಶ್ರೀನಗರ :
ಮೂವರು ಉಗ್ರರಿಗೆ ತನ್ನ ನಿವಾಸದಲ್ಲಿ ಆಶ್ರಯ ನೀಡಿದ್ದ ಡಿವೈಎಸ್ ಪಿ ದೇವೇಂದ್ರ ಸಿಂಗ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ದೇವಿಂದರ್ ಸಿಂಗ್ ಟಾಪ್ ರ್‍ಯಾಂಕರ್. ಕಳೆದ ವರ್ಷ ಆಗಸ್ಟ್ 15ರಂದು ದೇವಿಂದರ್ ಸಿಂಗ್ಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯ್ತು. ಶ್ರೀನಗರ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಆಯಂಟಿ ಹೈಜಾಕಿಂಗ್ ಸ್ಕ್ವಾಡ್ನಲ್ಲಿ ಡಿಎಸ್ಪಿ ಕಾರ್ಯನಿರ್ವಹಿಸುತ್ತಿದ್ದರು.
ಜಮ್ಮು ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದಲ್ಲಿರುವ ನಿವಾಸದಲ್ಲಿಯೇ ಮೂವರು ಉಗ್ರರಿಗೆ ದೇವೇಂದ್ರ ಸಿಂಗ್ ಆಶ್ರಯ ನೀಡಿದ್ದರು.
ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್– ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಜಮ್ಮು- ಕಾಶ್ಮೀರದ ಪೊಲೀಸರು ವಿಚಾರಣೆ ಮುಂದುವರೆಸಿದ್ದರು.
ದೇವೇಂದ್ರ ಸಿಂಗ್ ಅವರ ನಿವಾಸವನ್ನು ಶೋಧಿಸಿರುವ ಪೊಲೀಸರು ಎರಡು ಪಿಸ್ತೂಲ್ , ಒಂದು ಎಕೆ ರೈಫಲ್ ಅಲ್ಲದೇ ಭಾರಿ ಪ್ರಮಾಣದ ಸ್ಟೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ನೀಡಲು ಅವರ ಹೆಸರನ್ನು ಪರಿಗಣಿಸಲಾಗಿತ್ತು. ಆದರೆ, ಈ ಪ್ರಕರಣದಿಂದಾಗಿ ಅದನ್ನು ತಡೆಹಿಡಿಯುವ ಹಾಗೂ ಕಳೆದ ವರ್ಷ ನೀಡಲಾಗಿದ್ದ ರಾಷ್ಟ್ರಪತಿ ಪದಕವನ್ನು ವಾಪಾಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ