ಅಮಿತ್ ಶಾ ಕೈಸೇರಿದ ಟಾಪ್ – 10 ಉಗ್ರರ ಲಿಸ್ಟ್!!

ನವದೆಹಲಿ:

      ಕಾಶ್ಮೀರದ ಕಣಿವೆ ಪ್ರದೇಶದಲ್ಲಿರುವ ಟಾಪ್ 10 ಉಗ್ರರ ಪಟ್ಟಿಯನ್ನು  ಭದ್ರತಾಪಡೆ ಅಧಿಕಾರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಡೆದಿದ್ದಾರೆ.

      ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯೊಂದಿಗೆ 2010ರಿಂದ ಗುರುತಿಸಿಕೊಂಡಿದ್ದು ಇದೀಗ ಅದರ ನಾಯಕನಾಗಿರುವ ರಿಯಾಜ್​ ಅಹ್ಮದ್​ ನೈಕು ಹೆಸರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

     ಈ ಪಟ್ಟಿಯಲ್ಲಿ ಶ್ರೀನಗರದ ಮೊಹಮ್ಮದ್​ ಅಶ್ರಾಖ್​ ಖಾನ್​, ಡಾ. ಸೈಫುಲ್ಲಾಬಾರಾಮುಲ್ಲಾದ ಮೆಹ್ರಾಜ್​ ಉದ್​ ದ್ದಿನ್​, ಕುಪ್ವಾರಾದ ಏಜಾಜ್​ ಅಹ್ಮದ್​ ಮಲಿಕ್​ ಮತ್ತು ಪುಲ್ವಾಮಾದ ಅರ್ಷೈದ್​ ಉಲ್​ ಹಕ್​, ಲಷ್ಕರ್​ ಎ ತೊಯ್ಬಾದ ವಾಸಿಂಗ್​ ಅಹ್ಮದ್​ ಅಲಿಯಾಸ್​ ಒಸಾಮಾ, ಜೈಷ್​ ಎ ಮೊಹಮ್ಮದ್​ನ ಹಫೀಜ್​ ಉಮರ್​ ಮತ್ತು ಝಾಹೀದ್​ ಶೇಖ್​ ಈ ಪಟ್ಟಿಯಲ್ಲಿರುವ ಇತರ ಉಗ್ರರಾಗಿದ್ದಾರೆ. 

      ಈ ಭಯೋತ್ಪಾದಕರೇ ಭದ್ರತಾ ಏಜೆನ್ಸಿಗಳ ಮುಂದಿನ ಪ್ರಮುಖ ಟಾರ್ಗೆಟ್ ಆಗಿದೆ. ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಈ ಉಗ್ರರನ್ನು ಮಟ್ಟ ಹಾಕಲು ಸಕಲ ಸಿದ್ಧತೆ ನಡೆದಿದೆ ಎನ್ನಲಾಗಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link