ಮಾತುಕತೆ ಮೂಲಕ ಯುದ್ಧ ಭೀತಿ ದೂರ ಮಾಡಿ – ಜಪಾನ್

ಟೊಕಿಯೋ:

     ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಶಾಂತಿ ಮಾತುಕತೆಗೆ ಮುಂದಾಗುವ ಮೂಲಕ ಯುದ್ಧ ಭೀತಿಯನ್ನು ದೂರ ಮಾಡಬೇಕು ಎಂದು ಜಪಾನ್ ವಿದೇಶಾಂಗ ಮಂತ್ರಿ ಟೊಕೊ ಕೊನೊ ಆಗ್ರಹಿಸಿದ್ದಾರೆ.

      ಪಾಕ್ ನೆಲದಲ್ಲಿ ಭಾರತ ವಾಯುದಾಳಿ ಮಾಡಿದ ಬಳಿಕ ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ವಿಶ್ವದ ಇತರ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.

      ಭಾರತ-ಪಾಕ್ ಯುದ್ಧ ಭೀತಿ ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮುಂತಾದ ರಾಷ್ಟ್ರಗಳಿಗೆ ಆತಂಕ ಮೂಡಿಸಿದ್ದು, ಪರಿಸ್ಥಿತಿಯನ್ನು ಶಾಂತಿಯಿಂದ ನಿಭಾಯಿಸುವಂತೆ ಎರಡೂ ರಾಷ್ಟ್ರಗಳಿಗೆ ಮನವಿ ಮಾಡುತ್ತಿವೆ.

       ನಿನ್ನೆಯಷ್ಟೇ ಭಾರತ-ಪಾಕ್ ನಡುವೆ ಸಂಧಾನಕಾರನಾಗಿ ಕೆಲಸ ನಿರ್ವಹಿಸಲು ಸಿದ್ಧವಿರುವುದಾಗಿ ರಷ್ಯಾ ಹೇಳಿತ್ತು. ಇಂದು ಜಪಾನ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾರತ-ಪಾಕ್ ನಡುವಿನ ಯುದ್ಧ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link