ಜೈಶ್ ಉಗ್ರ ಸಜ್ಜದ್ ಖಾನ್ ಸೆರೆ!!

ಹೊಸದಿಲ್ಲಿ:

       ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮುದಸ್ಸೀರ್ ನ ಆಪ್ತ ಜೈಶ್ ಉಗ್ರ ಸಜ್ಜದ್ ಖಾನ್ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.  

      27 ವರ್ಷದ ಸಜ್ಜದ್ ಖಾನ್​​​ ಪುಲ್ವಾಮಾ ನಿವಾಸಿಯಾಗಿದ್ದು, ಲಜಪತ್​​ ರಾಯ್​ ಮಾರ್ಕೆಟ್ ಬಳಿ ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

      ದೆಹಲಿಯಲ್ಲಿ ಸ್ಲೀಪರ್​ ಸೆಲ್(ಆತ್ಮಾಹುತಿ ದಾಳಿ) ಘಟಕ ಸ್ಥಾಪಿಸುವಂತೆ ಮುದಾಸ್ಸಿರ್, ಸಜ್ಜದ್ ಖಾನ್​​ಗೆ​ ಟಾಸ್ಕ್​​ ನೀಡಿ ಕಳುಹಿಸಿದ್ದ ಎಂದು ಪೊಲೀಸರು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಮುದಸ್ಸೀರ್ ನನ್ನು ಈ ಹಿಂದೆ ಭಾರತದ ಸೇನೆ ಅದೇ ಪುಲ್ವಾಮನಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿತ್ತು.

      ದೆಹಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೆಂಪುಕೋಟೆಯ ಸಮೀಪದಲ್ಲಿ ಸೆರೆಸಿಕ್ಕ ಈತನನ್ನು ಪೊಲೀಸರು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

      ಕಳೆದ ಫೆಬ್ರವರಿಯಲ್ಲಿ ಪುಲ್ವಾಮದಲ್ಲಿ ಸೇನಾ ವಾಹನಗಳ ಮೇಲೆ ನಡೆದಿದ್ದ, ಆತ್ಮಹತ್ಯಾ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾಗಿದ್ದರು. ಪಾಕಿಸ್ತಾನ ಮೂಲದ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಗಟನೆ ತನ್ನ ಆತ್ಮಹತ್ಯಾ ದಾಳಿಕೋರನ ಮೂಲಕ ಸುಮಾರು 500 ಕೆಜಿ ಸ್ಫೋಟಕ ತುಂಬಿದ ವಾಹನವನ್ನು ಸೈನಿಕರ ವಾಹನಗಳತ್ತ ನುಗ್ಗಿಸಿ ಸ್ಫೋಟಿಸಿತ್ತು. ಅಲ್ಲದೆ ಈ ದಾಳಿ ಬಳಿಕ ದಾಳಿಯ ಹೊಣೆಯನ್ನೂ ಹೊತ್ತುಕೊಂಡಿತ್ತು. ಇದೀಗ ಈ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಜ್ಜದ್ ಖಾನ್ ಎಂಬ ಜೈಶ್ ಉಗ್ರನನ್ನು ಬಂಧಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ