ದೆಹಲಿ:
ಜಸ್ಟಿಸ್ ರಂಜನ್ ಗೊಗೋಯಿ ಅವರು ಭಾರತದ 46ನೇ, ನೂತನ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಸ್ಟಿಸ್ ಗೊಗೋಯಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ಪ್ರಮಾಣ ವಚನ ಬೋಧಿಸಿದರು.
ಅಕ್ಟೋಬರ್ 2 ರಂದು ದೀಪಕ್ ಮಿಶ್ರಾ ಅವರ ಅಧಿಕಾರಾವಧಿ ಗೊಂಡಿದ್ದು, ರಂಜನ್ ಗೋಗಯ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಆರಿಸುವಂತೆ ಮಿಶ್ರಾ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ನ್ಯಾ.ರಂಜನ್ಗೊಗೊಯ್ ಅವರನ್ನು ಸುಪ್ರೀಂ ಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವಂತೆ ಹಾಲಿ ಸಿಜೆಐ ದೀಪಕ್ ಮಿಶ್ರಾ ಕೇಂದ್ರ ಸರ್ಕಾರಕ್ಕೆ ಈ ಮೊದಲು ಪತ್ರ ಬರೆದಿದ್ದರು.
ಈ ವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ, ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ತಮ್ಮ ಉತ್ತರಾಧಿಕಾರಿ ಹೆಸರನ್ನು ಸೂಚಿಸುತ್ತಾರೆ. ನ್ಯಾಯಾಂಗದ ಇತಿಹಾಸದಲ್ಲಿ ಎರಡು ಬಾರಿ ಮಾತ್ರ ಈ ಕಟ್ಟಳೆ ಮುರಿಯಲಾಗಿದೆ. ಆ ಎರಡು ಬಾರಿಯೂ ಪ್ರಧಾನಿಯಾಗಿದ್ದವರು ಇಂದಿರಾ ಗಾಂಧಿ.
ರಂಜನ್ ಅವರು ನೂತನ ಸಿಜೆಐ ಆಗಿ ಇಂದು(ಅಕ್ಟೋಬರ್ 03) ಅಧಿಕಾರ ಸ್ವೀಕರಿಸಲಿದ್ದು, ಅವರು 2019 ರ ನವೆಂಬರ್ ವರೆಗೂ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ.
