ನವದೆಹಲಿ :
ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ನಿಂದ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಗ ಬಲ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ನ ಮೊದಲ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊನ್ನೆ(ಬುಧವಾರ) ಮತ್ತು ಎರಡನೇ ಹಂತದ ವಿವರಗಳನ್ನು ನಿನ್ನೆ (ಗುರುವಾರ) ನೀಡಿದ್ದರು. ಇಂದು ಇತರೆ ಕ್ಷೇತ್ರಗಳಿಗೆ ಏನು ಸಿಗಲಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸುತ್ತಿದ್ದಾರೆ.
ಆರ್ಥಿಕ ಪ್ಯಾಕೇಜ್ ನ ಮುಖ್ಯಾಂಶಗಳು:
- ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿಗಳ ಘೋಷಣೆ.
- ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಲಕ್ಷ ರೂಪಾಯಿಗಳು ಮೀಸಲು.
- ಕಳೆದ 2 ತಿಂಗಳುಗಳಲ್ಲಿ ಕೃಷಿ ಕ್ಷೇತ್ರದ 11 ವಿಭಾಗಗಳನ್ನು ಬಲಗೊಳಿಸಲು ಕೇಂದ್ರ ಸರಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ.
- ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಕಳೆದ ಬಜೆಟ್ ಸಂದರ್ಭದಲ್ಲಿ ಘೋಷಿಸಲಾಗಿತ್ತು. ಇದರಡಿಯಲ್ಲಿ 20 ಲಕ್ಷ ಕೋಟಿ ರೂಪಾಯಿಗಳನ್ನು ಘೋಷಿಸಲಾಗುತ್ತದೆ. ಈ ಮೂಲಕ 65 ಲಕ್ಷ ಜನರಿಗೆ ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ಉದ್ಯೋಗವಕಾಶವನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
- ಲಾಕ್ ಡೌನ್ ಅವಧಿಯಲ್ಲಿ ಕನಿಷ್ಟ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂಪಾಯಿಗಳ ಉತ್ಪನ್ನಗಳ ಖರೀದಿ.
- 53 ಕೋಟಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ರೋಗನಿರೋಧಕ ಲಸಿಕೆ
- ಡೈರಿ ಉತ್ಪನ್ನಗಳಿಗಾಗಿ 15 ಸಾವಿರ ಕೋಟಿ ರೂ.ಬಿಡುಗಡೆ
- ಜೇನು ಸಾಕಾಣಿಕೆಗೆ 500 ಕೋಟಿ ರೂ. ಮೀಸಲು
ಮೀನುಗಾರಿಕೆಗೆ 20 ಸಾವಿರ ಕೋಟಿ ರೂ.ನೆರವು
- ಅಗತ್ಯ ವಸ್ತುಗಳ ಸಂಗ್ರಹಕ್ಕೆ ಯಾವುದೇ ಮಿತಿಯಿಲ್ಲ
- ಇ-ಟ್ರೆಂಡಿಂಗ್ ಮೂಲಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ
- ತರಕಾರಿ ಸಂಗ್ರಹಣೆಗೆ 500 ಕೋಟಿ ಮೀಸಲು
- ಪಶುಸಂಗೋಪನೆಗೆ 15 ಸಾವಿರ ಕೋಟಿ ರೂ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ