ಕಲ್ಲಿದ್ದಲು ವಲಯಕ್ಕೆ 50 ಸಾವಿರ ಕೋಟಿ ರೂ.ಹೂಡಿಕೆ!!

ನವದೆಹಲಿ : 

      ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಗ ಬಲ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ನ  4 ನೇ ಹಂತದ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸುತ್ತಿದ್ದಾರೆ.

ಆರ್ಥಿಕ ಪ್ಯಾಕೇಜ್ ನ ಮುಖ್ಯಾಂಶಗಳು: 
  • ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಆತ್ಮ ನಿರ್ಭರ ಪ್ಯಾಕೇಜ್
  • 8 ವಲಯಗಳಿಗೆ ಇಂದು ನೆರವು ಘೋಷಣೆ
  1. ರಕ್ಷಣಾ ವಲಯ
  2. ಕಲ್ಲಿದ್ದಲು
  3. ಖನಿಜ ಸಂಪತ್ತು
  4. ವಿಮಾನಯಾನ
  5. ಅಣುಶಕ್ತಿ
  6. ಇಂಧನ ಪೂರೈಕೆ
  7. ಬಾಹ್ಯಾಕಾಶ
  8. ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಧನ ಪೂರೈಕೆ ಕಂಪನಿ
  • ದೇಶದಲ್ಲಿ ಪ್ರಸ್ತುತ ಇರುವ 3376 ಕೈಗಾರಿಕಾ ಪಾರ್ಕ್​ಗಳಿ​ಗೆ ರ್ಯಾಂಕಿಂಗ್
  • ಕಲ್ಲಿದ್ದಲು ವಲಯಕ್ಕೆ 50 ಸಾವಿರ ಕೋಟಿ ರೂ.ಹೂಡಿಕೆ
  • ಭಾರತದಲ್ಲೇ ರಕ್ಷಣಾ ಸಾಮಗ್ರಿ ಉತ್ಪಾದನೆ, ಖರೀದಿಗೆ ಆದ್ಯತೆ
  • ಖನಿಜ ಉತ್ಪಾದನೆ ಹೆಚ್ಚಿಸಲು ಖಾಸಗಿ ಹೂಡಿಕೆ ಹೆಚ್ಚಿಸಲು 500 ಗಣಿಗಾರಿಕೆ ಕೇಂದ್ರಗಳಿಗೆ ಮುಕ್ತ ಅವಕಾಶ
  • ಏರ್​ಕ್ರಾಫ್ಟ್​​ ನಿರ್ವಹಣೆ, ದುರಸ್ಥೆಯಲ್ಲಿ ಭಾರತ ಜಾಗತಿಕ ಹಬ್​ ಆಗಲಿದೆ
  • ಮೆಟ್ರೋ ನಗರಗಳಲ್ಲಿ ಡಿಸ್ಕಾಂಗಳ ಖಾಸಗೀಕರಣ
  • ಸಾಮಾಜಿಕ ಮೂಲ ಸೌಕರ್ಯ ವಲಯಕ್ಕೆ 8,100 ಕೋಟಿ
  •  ಪರಮಾಣು ವಲಯದೊಂದಿಗೆ ಸ್ಟಾರ್ಟ್​ಪ್​ ಪರಿಸರ ವ್ಯವಸ್ಥೆಯ ಜೋಡಣೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap