ಸ್ಟಾರ್ ನಟರ ಹಾಗೂ ನಿರ್ಮಾಪಕರ ಮೇಲಿನ ಐಟಿ ದಾಳಿ ಮೊತ್ತ ಬಹಿರಂಗ!!

0
42

ಬೆಂಗಳೂರು :

   ಕರ್ನಾಟಕ ಹಾಗೂ ಗೋವಾದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ ಮೂರು ದಿನಗಳ ಕಾಲದ ಐಟಿ ದಾಳಿ ನಂತರ ಇಂದು ಐಟಿ ದಾಳಿಯ ಸಂದರ್ಭದಲ್ಲಿ ಕಲೆ ಹಾಕಿದ ಮಾಹಿತಿ, ಜಪ್ತಿಯಾದ ಮೊತ್ತವನ್ನು ಬಹಿರಂಗ ಪಡಿಸಿದ್ದಾರೆ. ಒಟ್ಟಾರೆ, 109ಕೋಟಿ ರು ಗೂ ಅಧಿಕ ಮೊತ್ತಕ್ಕೆ ಸರಿಯಾದ ರಸೀತಿ ಸಿಕ್ಕಿಲ್ಲ, ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಹೇಳಲಾಗಿದೆ.

   ಚಿತ್ರಗಳಿಗೆ ನಟರು ಪಡೆಯುವ ಸಂಭಾವನೆ, ಚಿತ್ರಗಳ ಸ್ಯಾಟಲೈಟ್ ಹಕ್ಕು, ಡಿಜಿಟಲ್ ಹಕ್ಕು, ಆಡಿಯೋ ಹಕ್ಕುಗಳ ಮಾಹಿತಿ ಕಲೆ ಹಾಕಲಾಗಿದೆ. ಒಟ್ಟಾರೆ, 2.85 ಕೋಟಿ ರು ನಗದು, 25 ಕೆಜಿ ಆಭರಣ ಸೇರಿದಂತೆ ಜಪ್ತಿಯಾದ ವಸ್ತುಗಳ ಮೊತ್ತ 11ಕೋಟಿರುಗೂ ಅಧಿಕವಾಗಿದೆ.

   ಪವರ್ ಸ್ಟಾರ್ ಪುನೀತ್, ರಾಕಿಂಗ್ ಸ್ಟಾರ್ ಯಶ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ನಿರ್ಮಾಪಕರಾದ ವಿಜಯ್ ಕಿರಗಂದೂರು, ಜಯಣ್ಣ, ಶಾಸಕ ಸಿಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಮನೆ, ಕಚೇರಿ ಮೇಲೆ ದಾಳಿ 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here