‘ಪಶುವೈದ್ಯೆ ಅತ್ಯಾಚಾರಿಗಳ ಎನ್​ಕೌಂಟರ್ ಸರಿಯಲ್ಲ’ – ಕಾರ್ತಿ ಚಿದಂಬರಂ

ಚೆನ್ನೈ :

      ತೆಲಂಗಾಣದ ಪಶುವೈದ್ಯೆ ಅತ್ಯಾಚಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪೊಲೀಸ್ ಕ್ರಮವನ್ನು ದೇಶವೇ ಕೊಂಡಾಡುತ್ತಿರುವಾಗ ಸಂಸದ ಕಾರ್ತಿ ಚಿದಂಬರಂ ಅವರು ಕಟುವಾಗಿ ಟೀಕಿಸಿದ್ದಾರೆ.

      ಈ ಕುರಿತು ಟ್ವೀಟ್ ಮಾಡಿರುವ ಅವರು, ಅತ್ಯಾಚಾರ ಮಾಡುವುದು ಅತ್ಯಂತ ಹೇಯ ಕೃತ್ಯ. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅತ್ಯಾಚಾರಿಗಳನ್ನು ನಾನು ಬೆಂಬಲಿಸುವುದಿಲ್ಲ, ಆದರೆ ಎನ್ ಕೌಂಟರ್ ಮೂಲಕ ಅವರನ್ನು ಹತ್ಯೆ ಮಾಡುವುದು ಸಮಾಜಕ್ಕೆ ಅಂಟಿದ ಕಳಂಕ. ಅನ್ಯಾಯಕ್ಕೊಳಗಾದವರಿಗೆ ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕಾಗಿರುವುದು ನಿಜವಾದರೂ ಈ ರೀತಿ (ಎನ್ ಕೌಂಟರ್) ಬೇಕಾಗಿಲ್ಲ. ಇದು ಸರಿಯಾದ ಮಾರ್ಗ ಅಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಶುವೈದ್ಯೆ ಅತ್ಯಾಚಾರ ಪ್ರಕರಣ : ಅತ್ಯಾಚಾರವೆಸಗಿದ್ದ ಸ್ಥಳದಲ್ಲೇ ಹಂತಕರು ಎನ್’ಕೌಂಟರ್!!!

      ಈ ಅಭಿಪ್ರಾಯಕ್ಕೆ ಟ್ವಿಟ್ಟರ್ ನಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. “ಓರ್ವ ರಾಜಕಾರಣಿಯಾಗಿ ನೀವು ಹೇಳುತ್ತಿರುವುದು ಎಷ್ಟು ಸರಿ? ನಿಮ್ಮ ಕುಟುಂಬದವರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ? ಪೊಲೀಸರು ಮಾಡಿದ ಕಾರ್ಯ ಸರಿಯಾಗಿದೆ,” ಎಂದು ಕೆಲವರು ಟ್ವೀಟ್​ಗೆ ಉತ್ತರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ