ತಿರುವನಂತಪುರಂ:
ಮಹಿಳೆಯರಿಬ್ಬರು ಶಬರಿಮಲೆ ಪ್ರವೇಶಿಸಿದ್ದನ್ನು ಖಂಡಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ.
ಪ್ರತಿಭಟನೆ ವೇಳೆ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿಯಲಾಗಿದ್ದು, ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಎಸ್’ಡಿಪಿಐ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಮಹಿಳೆಯರ ಶಬರಮಲೆ ಪ್ರವೇಶ ಖಂಡಿಸಿ ಕೇರಳ ಬಂದ್‌ಗೆ ಕರೆ ನೀಡಲಾಗಿದ್ದು, ಕರ್ನಾಟಕದಿಂದ ಕೇರಳಕ್ಕೆ ಹೋಗುವ ಕೆಎಸ್‌ಆರ್‌ರ್ಟಿಸಿ ಬಸ್‌ಗಳು ಕೂಡ ಸ್ಥಗಿತಗೊಂಡಿವೆ.
ಇದಲ್ಲದೆ, ಪೊಲೀಸರು, ಮಾಧ್ಯಮದ ವರದಿಗಾರರು ಹಾಗೂ ಲೇಖಕರ ಮೇಲೆಯೂ ದಾಳಿಗಲು ನಡೆದಿರುವುದಾಗಿ ವರದಿಗಳು ತಿಳಿಸಿವೆ.
ಪ್ರತಿಭಟನೆ ವೇಳೆ 7 ಪೊಲೀಸ್ ವಾಹನಗಳು ಹಾಗೂ 79 ಕೆಎಸ್ಆರ್’ಟಿಸಿ ಬಸ್ ಗಳನ್ನು ಧ್ವಂಸಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ