ತಿರುವನಂತಪುರಂ:
ನಾಗರ ಹಾವಿನಿಂದ ಕಚ್ಚಿಸಿ ಹೆಂಡತಿಯನ್ನುಹತ್ಯೆ ಮಾಡಿದ ಭಯಾನಕ ಪ್ರಕರಣ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕೇರಳ ಪೊಲೀಸರು ಖಾಸಗಿ ಬ್ಯಾಂಕ್ ಒಂದರ ಉದ್ಯೋಗಿಯಾದ 27 ವರ್ಷದ ಸೂರಜ್‌ನನ್ನು ಎಸ್.ಉತ್ತರ ಎಂಬ 25 ವರ್ಷದ ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ನಡೆಸಿದ ತನಿಖೆಯಲ್ಲಿ ಎರಡನೇ ಬಾರಿಯ ಪ್ರಯತ್ನದಲ್ಲಿ ಪತ್ನಿಯನ್ನು ಕೊಲ್ಲಲು ಯಶಸ್ವಿಯಾದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾನೆ.
10 ಸಾವಿರ ರೂ. ಪಾವತಿಸಿ ಹಾವಾಡಿಗ ಸುರೇಶ್‍ನಿಂದ ಹಾವನ್ನು ತಂದಿದ್ದ ಸೂರಜ್, ಪತ್ನಿ ಮಲಗಿದ್ದಾಗ ಅದನ್ನು ಬಿಟ್ಟಿದ್ದಾನೆ. ಮಹಿಳೆ ನಾಗರ ಹಾವು ಕಡಿತಕ್ಕೆ ಒಳಗಾಗಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ವಿಷವೇರಿದ್ದರಿಂದ ಬದುಕಿ ಉಳಿಯಲಿಲ್ಲ. 1 ವರ್ಷದ ಮಗು ಅಮ್ಮನಿಲ್ಲದ ಅನಾಥವಾಯಿತು. ಇದೀಗ ಮಗುವನ್ನು ಉತ್ತರಳ ಪೋಷಕರು ನೋಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ಬಳಿಯಿರುವ ದುಡ್ಡು, ಒಡವೆಗಳನ್ನು ದೋಚಿ ಬೇರೊಬ್ಬಳನ್ನು ಮದುವೆಯಾಗುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಳಿಯ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ಸಹ ಪೋಷಕರು ದೂರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ