ಕೆಮ್ಮುತ್ತಿದ್ದ ಬಾಲಕನ ಶ್ವಾಸಕೋಶದಲ್ಲಿ ಪೆನ್ ಕ್ಯಾಪ್ ಪತ್ತೆ!!!

ಕೊಲ್ಕತ್ತಾ : 

      ಬಾಲಕನ ಶ್ವಾಸಕೋಶದಿಂದ ಪೆನ್ ಕ್ಯಾಪ್‌ ಒಂದನ್ನು ಹೊರತೆಗೆಯುವಲ್ಲಿ ಕೋಲ್ಕತ್ತಾದ SSKM ಆಸ್ಪತ್ರೆ ವೈದ್ಯರು ಸಫಲರಾಗಿದ್ದಾರೆ.

      12 ವರ್ಷದ ಬಾಲಕನೊಬ್ಬ ತೀವ್ರ ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ . ಹೀಗಾಗಿ ಆತನನ್ನ ಸೇಟ್ ​ಶುಕ್ ​ಲಾಲ್ ಕರ್ನಾನಿ ಮೇಮೋರಿಯಲ್ (SSKM) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಬಾಲಕನನ್ನ ಪರೀಕ್ಷಿಸಿದ ವೈದ್ಯರು , ಆತನ ಶ್ವಾಸಕೋಶದಲ್ಲಿ ಏನೋ ವಸ್ತುವೊಂದು ಸಿಲುಕಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು . ಹೀಗಾಗಿ ಸಿ.ಟಿ ಸ್ಕ್ಯಾನ್ ಮಾಡಿದಾಗ , ಬಾಲಕನ ಎಡಭಾಗದ ಶ್ವಾಸಕೋಶದಲ್ಲಿ ಪೆನ್ನಿನ ಕ್ಯಾಪ್ ಪತ್ತೆಯಾಗಿದ್ದು , ಪೋಷಕರಿಗೆ ಶಾಕ್ ಆಗಿದೆ.

Image result for lungs x ray doctor"

      ಕಳೆದ ನವೆಂಬರ್ ​​ನಲ್ಲಿ ಬಾಲಕ ಪೆನ್ ಕ್ಯಾಪ್ ನುಂಗಿದ್ದ, ಆ ಸಂದರ್ಭದಲ್ಲಿ ಸ್ಥಳೀಯ ಆಸ್ಪತ್ರೆಗೆ ಮಗನನ್ನ ಕರೆದುಕೊಂಡು ಹೋಗಿದ್ವಿ. ಆದ್ರೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಲಿಲ್ಲ . ಒಂದು ವೇಳೆ ಪೆನ್ ಕ್ಯಾಪ್ ನುಂಗಿಬಿಟ್ಟಿದ್ದರೆ , ನಿಮ್ಮ ಮಗ ಇಷ್ಟೊತ್ತಿಗೆ ಪ್ರಾಣ ಬಿಟ್ಟಿರುತ್ತಿದ್ದ ಎಂದು ಹೇಳಿದ್ರು. ಅಂದಿನಿಂದ ನಮ್ಮ ಮಗನಿಗೆ ನಿರಂತರವಾಗಿ ಕೆಮ್ಮು , ನೆಗಡಿ ಕಾಣಿಸಿಕೊಳ್ತಿತ್ತು ಎಂದು ಪೋಷಕರು ಹೇಳಿದ್ದಾರೆ.

        ನಂತರ ಬ್ರಾಂಕೋಸ್ಕೋಪಿ ಚಿಕಿತ್ಸೆ ಮೂಲಕ ಬಾಲಕನ ಶ್ವಾಸದಿಂದ ಕ್ಯಾಪ್ ಹೊರತೆಗೆಯಲು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link