ಬಳ್ಳಾರಿ:
ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್ ದೇಹಕ್ಕೆ ಕಬ್ಬಿಣದ ರಾಡ್ಗಳು ಚುಚ್ಚಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ಹೊರವಲಯದಲ್ಲಿ ನಡೆದಿದೆ.
ಕಬ್ಬಿಣದ ರಾಡ್ ತುಂಬಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್ನ ಎಡಭಾಗದಲ್ಲಿ ಕಂಡಕ್ಟರ್ ಕುಳಿತಿದ್ದ ಕಂಡಕ್ಟರ್ ಹೊಟ್ಟೆಗೆ ರಾಡುಗಳು ಚುಚ್ಚಿವೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಕಂಡಕ್ಟರ್ಗೆ ಚುಚ್ಚಿದ್ದ ರಾಡುಗಳನ್ನ ಹೊರ ತೆಗೆದಿದ್ದಾರೆ.
ಬಳಿಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸದ್ಯಕ್ಕೆ ಕಂಡಕ್ಟರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.