ಹತ್ಯೆಯಾದ ಕಿರಣ್ ತಿವಾರಿ ಪತ್ನಿ ಈಗ ಹಿಂದು ಸಮಾಜ ಪಾರ್ಟಿಯ ಅಧ್ಯಕ್ಷೆ!!

ಲಕ್ನೋ : 

      ಹಿಂದು ಸಮಾಜ ಪಾರ್ಟಿಯ ನೂತನ ಅಧ್ಯಕ್ಷೆಯಾಗಿ ಕಮಲೇಶ್ ತಿವಾರಿ ಪತ್ನಿ ಕಿರಣ್ ತಿವಾರಿ ಅವರನ್ನು ಅಯ್ಕೆ ಮಾಡಲಾಗಿದ್ದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

      ಹಿಂದು ಸಮಾಜ ಪಾರ್ಟಿಯ ಸಂಸ್ಥಾಪಕ ಹಾಗೂ ಮುಖ್ಯಸ್ಥರಾಗಿದ್ದ ಕಮಲೇಶ್ ತಿವಾರಿಯವರ ಮೇಲೆ ದುಷ್ಕರ್ಮಿಗಳ ಗುಂಪು ಗುಂಡಿನ ದಾಳಿ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ತಿವಾರಿಯವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದರು. ಈ ಘಟನೆಯಿಂದ ಲಖನೌ ಜನ ಬೆಚ್ಚಿಬಿದ್ದಿದ್ದರು.

      ಸದ್ಯ ಹಿಂದು ಸಮಾಜ ಪಾರ್ಟಿಯ ನೂತನ ಅಧ್ಯಕ್ಷೆಯಾಗಿರುವ ಕಿರಣ ತಿವಾರಿ ಅವರು ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೀಗಾಗಿ ಸುದ್ದಿಗೋಷ್ಠಿಯಲ್ಲಿ ಪತಿಯ ಕೊಲೆಯ ಬಗ್ಗೆ ಏನು ಹೇಳಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

      ತಿವಾರಿ ಪ್ರಕರಣದಲ್ಲಿ ಇಲ್ಲಿವರೆಗೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮೇಲಿನ ಇಬ್ಬರು ಆರೋಪಿಗಳು ಸೇರಿದಂತೆ ಉಳಿದವರನ್ನು ರಶೀದ್ ಪಥಾನ್, ಫೈಜಾನ್ ಶೇಕ್ ಮತ್ತು ಮೌಲಾನಾ ಮೊಹ್ಶಿನ್ ಶೇಕ್ ಎಂದು ಗುರುತಿಸಲಾಗಿದ್ದು, ಐವರು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಬೆಳವಣಿಯ ನಂತರ ಹಿಂದು ಸಮಾಜ ಪಾರ್ಟಿ ನೂತನ ಅಧ್ಯಕ್ಷೆಯನ್ನು ಆಯ್ಕೆ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link