ಎಲ್ ಪಿಜಿ ಸಿಲಿಂಡರ್ ದರ ಏರಿಕೆ!!!

ದೆಹಲಿ:

       ನಿನ್ನೆವರೆಗೆ ಈರುಳ್ಳಿ ದರ ಗಗನಕೇರಿದ್ದು ಇದೀಗ ಎಲ್ ಪಿಜಿ ದರ ಏರಿಕೆಯಾಗುವ ಮೂಲಕ ಶಾಕ್ ನೀಡಿದೆ.

       ಹೌದು ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ದರ ಏರಿಕೆಯಾಗಿದ್ದು. ಡಿಸೆಂಬರ್ 1ರಿಂದಲೇ ನೂತನ ದರಗಳು ಜಾರಿಯಾಗಿವೆ. ದೇಶದ ವಿವಿಧ ರಾಜ್ಯಗಳಲ್ಲಿ ಎಲ್ ಪಿಜಿ ದರಗಳಲ್ಲಿ 13.20 ರಿಂದ 13.45 ರೂವರೆಗೆ ದರ ಏರಿಕೆಯಾಗಿದೆ.

      14.2 ಕೆಜಿ ಸಿಲಿಂಡರ್ ಬೆಲೆ ಈಗ 730 ರೂ.ಗೆ ಏರಿದೆ. ಅದೇ ಸಮಯದಲ್ಲಿ, ವಾಣಿಜ್ಯ ಸಿಲಿಂಡರ್‌ನ ಬೆಲೆಯೂ 7.30 ರೂ. ಈಗ 19 ಕೆಜಿ ಸಿಲಿಂಡರ್ 1295.50 ರೂ. ಆಗಿದೆ. ಅಷ್ಟೇ ಅಲ್ಲ ಇದರೊಂದಿಗೆ 5 ಕೆಜಿ ಸಣ್ಣ ಸಿಲಿಂಡರ್ ಬೆಲೆ ಕೂಡ 5.41 ರೂ. ಏರಿಕೆಯಾಗಿ 269 ರೂ.ಆಗಿದೆ.

       ಇನ್ನು ರಾಜಧಾನಿ ಬೆಂಗಳೂರಿನಲ್ಲಿ 697.50 ರೂ.ಗೆ ಸಿಲಿಂಡರ್ ಏರಿಕೆಯಾಗಿದ್ದು, ವಿಶೇಷವೆಂದರೆ, ಕಳೆದ 4 ತಿಂಗಳಲ್ಲಿ ಎಲ್‌ಪಿಜಿಯ ಬೆಲೆ 118 ರೂ. ದುಬಾರಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ