ಕೇಜ್ರಿವಾಲ್ ಪ್ರಮಾಣಕ್ಕೆ ಜೂ.ಮಫ್ಲರ್ ಮ್ಯಾನ್ ಗೆ ಆಹ್ವಾನ!!!

ನವದೆಹಲಿ:

      ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ದೇಶದ ಗಮನ ಸೆಳೆದಿದ್ದ ಬೇಬಿ ಮಫ್ಲರ್ ಮ್ಯಾನ್​ಗೆ ಅರವಿಂದ ಕೇಜ್ರಿವಾಲ್ ಅವರ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ಸಿಕ್ಕಿದೆ.

     ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಪುಟಾಣಿ ಮಗುವೊಂದಕ್ಕೆ ಕೇಜ್ರಿವಾಲ್ ಸ್ಟೈಲ್​​ನಲ್ಲಿ ಡ್ರೆಸ್​ ಮಾಡಲಾಗಿತ್ತು. ಆ ಮಗುವಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬೇಬಿ ಮಫ್ಲರ್​ ಮ್ಯಾನ್​ ಅಂತ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿತ್ತು. ಮಗುವಿನ ಕ್ಯೂಟ್​​ನೆಸ್​​ ಜನರಿಗೆ ಇಷ್ಟವಾಗಿತ್ತು.

      ಫೆಬ್ರವರಿ 16ರಂದು ಅರವಿಂದ ಕೇಜ್ರಿವಾಲ್ ಭಾನುವಾರ ಬೆಳಗ್ಗೆ 10 ಗಂಟೆಗೆ ರಾಮಲೀಲಾ ಮೈದಾನದಲ್ಲಿ ಸತತ ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಬೇರೆ ರಾಜ್ಯಗಳ ರಾಜಕೀಯ ಮುಖಂಡರನ್ನ ದೂರ ಇಟ್ಟಿರೋ ಆಪ್, ಆ ಪುಟಾಣಿ ಅತಿಥಿ ಮಾತ್ರ ಕಾರ್ಯಕ್ರಮದಲ್ಲಿ ಕಾಣಿಸಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಘೋಷಿಸಿದೆ.

     ಈ ಸಂಬಂಧ ಆಮ್​ ಆದ್ಮಿ ಪಾರ್ಟಿಯ ಟ್ವಿಟರ್ ಹ್ಯಾಂಡಲ್​ನಲ್ಲಿ ಒಂದು ಟ್ವೀಟ್​ ಗಮನಸಳೆದಿದೆ. ಬಿಗ್​ ಅನೌನ್ಸ್​ಮೆಂಟ್ ಶೀರ್ಷಿಕೆಯ ಟ್ವೀಟ್​ನಲ್ಲಿ ಬೇಬಿ ಮಫ್ಲರ್ ಮ್ಯಾನ್ ಅವರನ್ನು ಫೆಬ್ರವರಿ 16ರಂದು ನಡೆಯುವ ಅರವಿಂದ ಕೇಜ್ರಿವಾಲ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂಬ ಸಂದೇಶವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap