3 ಸಮುದಾಯದಿಂದ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಬ್ಯಾನ್!!

ಭೋಪಾಲ್‌: 

       ಈಗೆಲ್ಲಾ ಮದುವೆ ಸಮಾರಂಭಕ್ಕೂ ಮುನ್ನಾ ನಡೆಯುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಳ್ಳಲು ತುಂಬಾ ಇಷ್ಟಪಡುತ್ತಾರೆ. ಆದರೆ ಈ ಪ್ರೀ ವೆಡ್ಡಿಂಗ್​ ಫೋಟೋಶೂಟ್​ವನ್ನು ಕೆಲ ಸಮುದಾಯಗಳು ನಿಷೇಧಿಸಿರುವುದು ಅಚ್ಚರಿ ಮೂಡಿಸಿದೆ.

      ಭೋಪಾಲ್​ನ ಗುಜರಾತಿ, ಜೈನ್​ ಮತ್ತು ಸಿಂಧಿ ಸಮುದಾಯಗಳು ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಬ್ಯಾನ್​ ಮಾಡಿದ್ದು, ಇದಕ್ಕೆ ಬೆಂಬಲಿಸಿದ ಪಿ.ಸಿ.ಶರ್ಮಾ ಇದು ನಮ್ಮ ಸಂಸ್ಕೃತಿ ಭಾಗವಲ್ಲ. ಜನರು ಏನನ್ನು ನಿಷೇಧಿಸುತ್ತಾರೋ ಅದನ್ನು ಸಾಮಾಜಿಕ ದೃಷ್ಟಿಕೋನದಿಂದ ಮಾಡಿರುತ್ತಾರೆ. ಮದುವೆ ಸಮಾರಂಭಗಳಲ್ಲಿ ಜನರು ಹಳೆಯ ಪದ್ಧತಿಗಳನ್ನು ಅನುಸರಿಸಿದರೆ ಅದು ಹೆಚ್ಚು ಯಶಸ್ವಿ ಮತ್ತು ಸಂತೋಷದಾಯಕವಾಗಿರುತ್ತದೆ ಎಂದು ಸಾರ್ವಜನಿಕ ಸಂಪರ್ಕ ಸಚಿವ ಪಿ.ಸಿ.ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

     ಸಮಾಜದ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿರುವ ಗುಜರಾತಿ ಸಮುದಾಯದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪಾಟೀಲ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ಒಂದು ತಪ್ಪು ಕಲ್ಪನೆ. ಎಷ್ಟೋ ವಿವಾಹಗಳು ನಿಶ್ಚಿತಾರ್ಥ ಆದ ನಂತರ ಮುರಿದು ಬೀಳುತ್ತವೆ. ಆದ್ದರಿಂದ ಈ ರೀತಿಯ ಸಂಪ್ರದಾಯವನ್ನು ನಾವು ತಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link