ಭೂಪಾಲ್:

ಹುತಾತ್ಮ ಯೋಧನ ಪತ್ನಿಗೆ ಹೊಸ ಮನೆ ಉಡುಗೊರೆ ನೀಡುವ ಮೂಲಕ ಅಲ್ಲಿನ ಯುವಕರು ಮಾನವೀಯತೆ ಹಾಗೂ ದೇಶಪ್ರೇಮ ಮೆರೆದಿದ್ದಾರೆ.
ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮೋಹನ್ ಲಾಲ್ ಸುನೇರ್ 1992ರ ಡಿಸೆಂಬರ್ 31 ರಂದು ತ್ರಿಪುರಾದಲ್ಲಿ ಹುತಾತ್ಮರಾಗಿದ್ದರು. ಬಳಿಕ ಹುತಾತ್ಮ ಯೋಧನ ಪತ್ನಿ ಹಳೆಯ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು.
ಇದನ್ನು ಕಂಡು ಮರುಗಿದ ಸುಮಾರು 20 ಯುವಕರು, 2018 ರ ರಕ್ಷಾ ಬಂಧನದ ದಿನ ಗ್ರಾಮದಲ್ಲಿ ಹುತಾತ್ಮ ಯೋಧನ ಪ್ರತಿಮೆ ಹಾಗೂ ಆತನ ಕುಟುಂಬಕ್ಕೆ ಮನೆ ನಿರ್ಮಿಸಲು ಪ್ರತಿಜ್ಞೆ ಮಾಡಿದ್ದರು. 
ನಂತರ ಮೂರು ತಿಂಗಳಲ್ಲಿ 11 ಲಕ್ಷ ಹಣ ಸಂಗ್ರಹಿಸಿ 8 ತಿಂಗಳಲ್ಲಿ ಮನೆ ನಿರ್ಮಿಸಿದ್ದಾರೆ, ಮನೆ ನಿರ್ಮಾಣಕ್ಕೆ 10 ಲಕ್ಷ ಹಾಗೂ ಹಾಗೂ ಉಳಿದ 1 ಲಕ್ಷ ರು.ಹಣವನ್ನು ಗ್ರಾಮದಲ್ಲಿ ಪ್ರತಿಮೆ ಸ್ತಾಪಿಸಲು ಬಳಸುವುದಾಗಿ ತಿಳಿಸಿದ್ದಾರೆ.
ಗುರುವಾರ ತಮ್ಮ ಸಹೋದರಿ ಹಾಗೂ ಹುತಾತ್ಮ ಯೋಧನ ಪತ್ನಿ ರಾಜು ಬಾಯ್ ಅವರಿಗೆ ಹೊಸ ಮನೆಯ ಕೀಯನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ. ಹುತಾತ್ಮ ಯೋಧನ ಪತ್ನಿ ಅವರಿಗೆ ರಾಖಿ ಕಟ್ಟಿದ್ದಾರೆ.
ಯುವಕರ ಈ ಕಾರ್ಯವನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಶ್ಲಾಘಿಸಿದ್ದಾರೆ. ಗ್ರಾಮದ ಯುವಕರ ಈ ಮಹತ್ವದ ಕಾರ್ಯದಿಂದಾಗಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹುತಾತ್ಮ ಯೋಧನ ಕುಟುಂಬ ಹೊಸ ಮನೆಗೆ ಶಿಫ್ಟ್ ಆದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








