ಕೊರೊನಾ ಗೆದ್ದು ಬಂದ ಮಧ್ಯಪ್ರದೇಶ ಮುಖ್ಯಮಂತ್ರಿ!!

ಭೋಪಾಲ್:

     ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೊರೊನಾ ಗೆದ್ದು  ಆಸ್ಪತ್ರೆಯಿಂದ ಬುಧವಾರದಂದು ಹೊರ ಬಂದಿದ್ದಾರೆ.

      ಕಳೆದ ಜುಲೈ 25 ರಂದು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರ ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೆ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಭೋಪಾಲ್‌ನಲ್ಲಿರುವ ಚಿರಾಯು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಚಿಕಿತ್ಸೆ ಪಡೆಯುತ್ತಿದ್ದರು.

      10 ದಿನಗಳ ನಂತ್ರ  ಸಿಎಂ ಶಿವರಾಜ್ ಸಿಂಗ್ ಅವರ ಕೊರೊನಾ ಪರೀಕ್ಷೆ ನಕಾರಾತ್ಮಕವಾಗಿದೆ. ಇದರ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಮನೆಯಲ್ಲೇ ಐಸೋಲೇಷನ್ ನಲ್ಲಿ ಇನ್ನೂ ಒಂದು ವಾರಗಳ ಕಾಲ ಇರಲಿದ್ದಾರೆ. 

      ಕೊರೊನಾ ಗೆದ್ದ ನಂತ್ರ ಸಿಎಂ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಕೊರೊನಾಕ್ಕೆ ಭಯಪಡುವ ಅಗತ್ಯವಿಲ್ಲ. ನಿರ್ಲಕ್ಷ್ಯ ಮಾಡಿದ್ರೆ ಕೊರೊನಾ ಮಾರಕವಾಗಲಿದೆ. ರೋಗಲಕ್ಷಣಗಳನ್ನು ಮರೆಮಾಚಬೇಕಾಗಿಲ್ಲ. ಚಿಂತಿಸಬೇಡಿ. ಆರಾಮವಾಗಿರಿ. ರೋಗವನ್ನು ಸಂತೋಷದಿಂದ ಎದುರಿಸಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap