ಹೆತ್ತ ಮಗಳಿಗೆ ಬೆಂಕಿ ಹಚ್ಚಿದ ತಂದೆ!!!

          40 ವರ್ಷದ ತಂದೆ ತನ್ನ ಮಗಳು ಯಾವಾಗಲೂ ಮೊಬೈಲ್​​ನಲ್ಲಿರುವುದನ್ನ ನೋಡಿ ರೋಸಿ ಹೋಗಿದ್ದ. ಮೊಬೈಲ್​ ಬಳಕೆ ಮಾಡದಂತೆ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ರೂ 16 ವರ್ಷದ ಮಗಳು ಕೇಳಿರಲಿಲ್ಲ. ಜತೆಗೆ ತಂದೆ ಜತೆ ಜಗಳ ಸಹ ಮಾಡಿದ್ದಳಂತೆ.  
  ಇನ್ನು ಮನೆಯವರು ಹೊರಗಡೆ ಹೋಗಿದ್ದ ವೇಳೆ ಮಗಳ ಮೇಲೆ  ಆತ ಸೀಮೆ ಎಣ್ಣೆ ಸುರಿದು  ಬೆಂಕಿ ಹಚ್ಚಿದ್ದಾನೆ.  ಇದರಿಂದ ಬಾಲಕಿಯ ದೇಹ ಶೇ 70 ರಷ್ಟು ಸುಟ್ಟಿದೆ. ಇದನ್ನ ನೋಡಿರುವ ಪಕ್ಕದ ಮನೆಯವರು ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ  ಇನ್ನು  ಕೃತ್ಯ ಎಸೆಗಿರುವ ತಂದೆಯನ್ನ  ಪೊಲೀಸರು ಬಂಧಿಸಿ,  ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link