ಹೆಣ್ಣುಮಗುವಿಗೆ ಜನ್ಮ ನೀಡಿದ ಹೆಂಡತಿಗೆ ಗಂಡನಿಂದ ತಲಾಖ್!!

ಲಕ್ನೋ:

     ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. 

     ಹೈದರ್​ ಗಂಜ್​ ತೆಹ್ಸಿಲ್​ನ ಜನ ಬಝಾರ್​ ನಿವಾಸಿಯಾಗಿರೋ 23 ವರ್ಷದ ಝಾಫ್ರಿನ್​ ಅಂಜುಮ್​ಗೆ​, ಕಳೆದ ಅಗಸ್ಟ್​ 18ರಂದು ಪತಿ ಅಸ್ತಿಖರ್​ ಅಹ್ಮದ್​​ ತಲಾಖ್​ ನೀಡಿದ್ದಾನೆ. ಝಾಫ್ರಿನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಹೆಣ್ಣು ಎಂಬ ಕಾರಣಕ್ಕೆ ರೋಷಗೊಂಡ ಪತಿ ತಲಾಖ್​ ನೀಡಿದ್ದಾನೆ.

       ಇದಕ್ಕೂ ಮುಂಚೆ ಝಾಫ್ರಿನ್ ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಳಂತೆ. ಅಲ್ಲದೆ ಝಾಫ್ರಿನ್ ಪತಿಯ ವರದಕ್ಷಿಣೆ ಬೇಡಿಕೆಯನ್ನು ಝಾಫ್ರಿನ್ ತಂದೆ ಪೂರೈಸಿಲ್ಲವೆಂದು ತಲಾಖ್​ ನೀಡಲಾಗಿದೆ ಎನ್ನಲಾಗಿದೆ. ಸದ್ಯ ಜಾಫ್ರಿನ್ ತಲಾಖ್ ನೀಡಿದ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

      ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಯೋಧ್ಯೆ ಗ್ರಾಮಾಂತರ ಎಸ್​ಪಿ ಸೈಲೇಂದ್ರ ಕುಮಾರ್​ ಸಿಂಗ್​ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap