ಅತ್ಯಾಚಾರಗೈದ ವ್ಯಕ್ತಿಯೊಂದಿಗೆ ​ಆಸ್ಪತ್ರೆಯ ಐಸಿಯುನಲ್ಲೇ ವಿವಾಹ!!

ಪುಣೆ :

      ಅತ್ಯಾಚಾರಕ್ಕೆ ಒಳಗಾದ ಯುವತಿ ಆತ್ಮಹತ್ಯೆಗೆ ಯತ್ನಿಸಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಆರೋಪಿಯನ್ನು ಬಲವಂತವಾಗಿ ಕರೆತಂದು ಮದುವೆ ಮಾಡಿಸಿದ ಅಪರೂಪದ ಘಟನೆ ಪುಣೆಯ ಚಕನ್ ಎಂಬಲ್ಲಿ ನಡೆದಿದೆ.

      ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಲು ಯುವತಿಗೆ ಒತ್ತಾಯಿಸಿದ್ದ ಆರೋಪಿ ಮದುವೆ ಆಗುವಂತೆ ಕೇಳಿದಾಗ ಕೆಳಜಾತಿಯವಳೆಂದು ನಿರಾಕರಿಸಿದ್ದ ಎನ್ನಲಾಗಿದೆ. ಇದರಿಂದ ನೊಂದ ಯುವತಿ ನ. 27ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಮಧ್ಯೆ ಮಹಿಳೆ ಸೂರಜ್ ನಲವಡೆ ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ಬಲವಂತದಿಂದ ದೈಹಿಕ ಸಂಪರ್ಕ ಸಾಧಿಸಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.

      ಸ್ಥಳೀಯರು ನಲವಡೆಯನ್ನು ಹಿಡಿದು ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಐಸಿಯುಗೆ ಎಳೆದು ತಂದರು. ಐಸಿಯುನಲ್ಲಿಯೇ ಬಲವಂತವಾಗಿ ಹಾರ ಬದಲಾಯಿಸಿ ಯುವತಿಯೊಂದಿಗೆ ಮದುವೆ ಮಾಡಿಸಿದ್ದರು. ಆದರೆ ವಿವಾಹದ ಬಳಿಕ ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

      ಎರಡು ದಿನಗಳ ಹಿಂದಷ್ಟೇ ಯುವತಿ, ಆರೋಪಿ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸ್ ತನಿಖೆ ನಡೆಯುತ್ತಿದೆ. ಇನ್ನು ಯುವತಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link