ನವದೆಹಲಿ:
ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಬೈಕಿಗೆ ಬೆಂಕಿ ಹಚ್ಚಿದ ಘಟನೆ ಗುರುವಾರ ನವದೆಹಲಿಯ ಶೇಖ್ ಸರಾಯ್‍ನಲ್ಲಿ ನಡೆದಿದೆ.
ರಾಕೇಶ್ ಬೈಕಿಗೆ ಬೆಂಕಿ ಹಚ್ಚಿದ ವ್ಯಕ್ತಿ. ಗುರುವಾರದಂದು ಈತನಿಗೆ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾವಿರಾರು ರುಪಾಯಿ ದಂಡ ತೆರುವಂತೆ ಸೂಚಿಸಿ ಚಲನ್ ನೀಡಿದ್ದಾರೆ.
दिल्ली के शेख सराय इलाके में एक बाइक सवार ने ट्रैफिक पुलिस द्वारा चालान काटने के बाद नाराज़ होकर अपनी बाइक में आग लगाई,पुलिस के मुताबिक बाइक सवार नशे की हालत में लग रहा है,मेडिकल जांच कराई जा रही है pic.twitter.com/1sRPrNlFjE
— Mukesh singh sengar (@mukeshmukeshs) September 5, 2019
ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಕೋಪಗೊಂಡ ರಾಕೇಶ್ ಬೈಕಿನಿಂದ ಡಾಕ್ಯುಮೆಂಟ್ಸ್ ತೆಗೆಯಲು ಪ್ರಯತ್ನಿಸುತ್ತಿದ್ದವನು ಇದ್ದಕ್ಕಿದ್ದಂತೆ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಹಿಂತಿರುಗಿ ನೋಡುವಷ್ಟರಲ್ಲಿ ಬೈಕು ಧಗ ಧಗ ಉರಿದು ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳಾ ಸಿಬ್ಬಂದಿ ಬಂದು ಬೆಂಕಿ ನಂದಿಸುವಷ್ಟರಲ್ಲಿ ಬೈಕು ಸುಟ್ಟು ಕರಕಲಾಗಿ ಬಿಟ್ಟಿದೆ.
ಈ ಘಟನೆ ಬಳಿಕ ಬೈಕ್ ಸವಾರನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದಾರೆ. ವಿಚಿತ್ರವಾಗಿ ಆಡುತ್ತಿದ್ದ ಈ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ವರ್ತಿಸಿರಬಹುದು ಎಂದು ಶಂಕಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
