ಮಂಡ್ಯದ ಯುವಕನನ್ನು ಕೋಟ್ಯಾಧಿಪತಿ ಮಾಡಿದ ಕೇರಳದ ಲಾಟರಿ!!

ಮಂಡ್ಯ:

      ಸ್ನೇಹಿತರ ಮದುವೆಗಾಗಿ ಹೋಗಿದ್ದ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಯುವಕನಿಗೆ ಕೇರಳದ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿದೆ.

      ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಉದ್ಯಮಿ ಪುತ್ರ ಸೋಹನ್ ಬಲರಾಮ್ ಸ್ನೇಹಿತರ ಮದುವೆಗಾಗಿ ಶನಿವಾರ ಕೇರಳದ ಪುಥನಾಥಣಿಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುವಾಗ ಸ್ನೇಹಿತರ ಒತ್ತಾಯದ ಮೇರೆಗೆ 100 ರೂ. ಕೊಟ್ಟು ಭಾಗ್ಯಧರ ಲಾಟರಿ ಕೊಂಡಿದ್ದರು.

      ಇದೀಗ ಸೋಹನ್ ಕೊಂಡಿದ್ದ ಲಾಟರಿ ಸಂಖ್ಯೆಗೆ ಕೋಟಿ ರೂ. ಬಂಪರ್ ಬಹುಮಾನ ಬಂದಿದೆ. ಈ ಮೂಲಕ ಮಂಡ್ಯದ ಯುವಕನನ್ನು ಕೇರಳದ ಲಾಟರಿ ಕೋಟ್ಯಧಿಪತಿಯನ್ನಾಗಿ ಮಾಡಿದೆ.

     ಸ್ನೇಹಿತರೊಬ್ಬರ ಲಾಟರಿ ಅಂಗಡಿಯಲ್ಲಿ 100 ರೂ. ಕೊಟ್ಟು ಒಂದು ಟಿಕೆಟ್ ಖರೀದಿಸಿದ್ದೆ. ಒಂದು ಕೋಟಿ ರೂ ಬಹುಮಾನ ನಿರೀಕ್ಷೆ ಮಾಡಿರಲಿಲ್ಲ. ಬಹುಮಾನ ಬಂದಿರುವುದು ಖುಷಿ ತಂದಿದೆ. ಹಣವನ್ನ ಬಿಸಿನೆಸ್​ಗೆ ಬಳಸಿಕೊಳ್ಳುತ್ತೇನೆ ಎಂದು ಸೋಹನ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ