ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ನಿವೃತ್ತ ಎಸ್ಪಿ

ಮಂಗಳೂರು:

 ನಿವೃತ್ತ ಎಸ್ಪಿಯೊಬ್ಬರು ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾ ದಿಡ್ಡಿ ಕಾರು ಚಲಾಯಿಸಿ ಸೃಷ್ಟಿಸಿದ ರಾದ್ದಾಂತದಿಂದ ರೊಚ್ಚಿಗೆದ್ದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.

  ನಗರದ ಬಿಜೈ ಬಟ್ಟಗುಡ್ಡೆ ಬಳಿ ಈ ಘಟನೆ ನಡೆದಿದೆ. ವೀಕೆಂಡ್ ಪಾರ್ಟಿ ಮುಗಿಸಿ ಮನೆ ಗೆ ಮರಳುತ್ತಿದ್ದ ನಿವೃತ್ತ ಎಸ್ಪಿ ಮಿತ್ರ ಹೆರಾಜೆ ಅವರ ಕಾರು ಬಿಜೈ ಬಟ್ಟಗುಡ್ಡೆ ರಸ್ತೆಯಲ್ಲಿ ಯದ್ವಾತದ್ವಾ ಸಂಚರಿಸಿದೆ. ಮದ್ಯದ ಮತ್ತಿನಲ್ಲಿದ್ದ ಮಿತ್ರ ಹೆರಾಜೆ ಅವರ ಕಾರು ಬಿಜೈನಿಂದ ಕೆಪಿಟಿಗೆ ಸಾಗುವ ದಾರಿಯ ಮಧ್ಯೆ ರಾಂಗ್ ಸೈಡ್ ನಲ್ಲಿ ಸಾಗಿ ಬಂದಿದೆ.

    ಈ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕೆಲ ವಾಹನಗಳಿಗೆ ಡಿಕ್ಕಿಯಾಗಿದೆ. ಇದರಿಂದ ಕೆಲ ವಾಹನಗಳು ಜಖಂಗೊಂಡಿವೆ. ಕಡಬದಲ್ಲಿ ಪಾನಮತ್ತರಾದ ಸೈನಿಕರಿಂದ ಪೊಲೀಸರ ಮೇಲೆ ದಾಳಿ ಈ ವೇಳೆ ರಸ್ತೆ ಬದಿಯ ಮನೆಯಲ್ಲಿ ಮೆಹಂದಿ ಕಾರ್ಯಕ್ರಮವೊಂದು ನಡೆಯುತ್ತಿದ್ದು, ಅಲ್ಲಿದ್ದ ಯುವಕರು ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ್ದಾರೆ.

  ಈ ವೇಳೆ ಅಪಘಾತವೆಸಗಿದ ವ್ಯಕ್ತಿ ನಿವೃತ್ತ ಎಸ್ಪಿ ಮಿತ್ರ ಹೆರಾಜೆ ಎಂದು ಗೋತ್ತಾಗುತ್ತಿದ್ದಂತೆ ಆಕ್ರೋಶಿತರು ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ವ್ಯಕ್ತಿ ತಾನು ನಿವೃತ್ತ ಎಸ್ಪಿಯೆಂದು ದರ್ಪ ಪ್ರದರ್ಶಿಸಿದ್ದಾರೆ ಎಂದು ಹೇಳಲಾಗಿದೆ. ಆಗ ಜನರ ಆಕ್ರೋಶ ಇನ್ನಷ್ಟು ಹೆಚ್ಚಾಗಿದೆ‌. ಈ ವೇಳೆ ಕದ್ರಿ ಮತ್ತು ಉರ್ವಾ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ ಎಂದು ಹೇಳಲಾಗಿದೆ. ಈ ಪರಿಣಾಮ ಅನಿವಾರ್ಯವಾಗಿ ಲಘ ಲಾಠಿ ಪ್ರಹಾರ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ಗುದ್ದಾಡಿದ ಆಟೋ ಚಾಲಕ ನಂತರ ಮಿತ್ರಹೆರಾಜೆ ಅವರನ್ನು ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ. 

  ಈ ವೇಳೆ ಪೊಲೀಸರ ನಡೆಯ ವಿರುದ್ಧ ಸಾರ್ವಜನಿಕರು ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಅನಿವಾರ್ಯವಾಗಿ ಕದ್ರಿ ಠಾಣಾಧಿಕಾರಿ ಮಾರುತಿ ನಾಯಕ್ ಮತ್ತು ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬೀಸಿದ್ದಾರೆ. ಜನರು ಕದಲದೇ ಇದ್ದಾಗ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಲಾಠಿ ಚಾರ್ಜ್ ಮಾಡಿದ್ದು, ಬಳಿಕ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap