ನವದೆಹಲಿ:
ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ಎಸ್ ಪಿಜಿ(ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ವಾಪಸ್ ಪಡೆದಿದೆ.
ಮನಮೋಹನ್ ಅವರಿಗೆ ಇನ್ಮುಂದೆ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಪ್ರಧಾನಿ ಸಿಂಗ್ ಗೆ ಝಡ್ ಪ್ಲಸ್ ಭದ್ರತೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ಪ್ರಕಾರ, ಹಾಲಿ ಮತ್ತು ಮಾಜಿ ಪ್ರಧಾನಿ, ವಿಐಪಿಗಳಿಗೆ ನೀಡಿರುವ ಭದ್ರತೆ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುತ್ತದೆ. ವ್ಯಕ್ತಿಗಳಿಗೆ ಇರುವ ಬೆದರಿಕೆ ಆಧಾರದ ಮೇಲೆ ಭದ್ರತಾ ಏಜೆನ್ಸಿ ಯಾರಿಗೆ ಯಾವ ವಿಧದ ಭದ್ರತೆ ನೀಡಬೇಕು ಎಂಬುದನ್ನು ಆಯಾ ಸಂಸ್ಥೆಗಳು ವೃತ್ತಿಪರವಾಗಿ ಚರ್ಚಿಸಿ ಕೈಗೊಂಡಿರುವ ನಿರ್ಧಾರ ಇದಾಗಿದೆ.
ಆ ನಿಟ್ಟಿನಲ್ಲಿ ಪ್ರಸ್ತುತ ಭದ್ರತೆಯ ಕುರಿತು ಪ್ರೊಪೆಶನಲ್ ಆಧಾರದ ಮೇಲೆ ಪುನರ್ ಪರಿಶೀಲನೆ ನಡೆಸಲಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿರುವ ಎಸ್ ಪಿಜಿ ಭದ್ರತೆ ವಾಪಸ್ ಪಡೆದು, ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗುತ್ತಿದೆ ಎಂದು ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ