ಪದ್ಮಭೂಷಣ ಪ್ರಶಸ್ತಿಗೆ ಮೇರಿಕೋಮ್, ಪಿ.ವಿ.ಸಿಂಧು ಹೆಸರು ಶಿಫಾರಸು!!

ನವದೆಹಲಿ:

      ರಾಷ್ಟ್ರದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣಕ್ಕೆ ರಾಷ್ಟ್ರದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಮೇರಿ ಕೋಮ್​ ಹಾಗೂ ಪಿ.ವಿ. ಸಿಂಧು ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ.

       6 ಬಾರಿಯ ಮಹಿಳಾ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ ಮೇರಿ ಕೋಮ್​ ಅವರ ಹೆಸರು ಶಿಫಾರಸುಗೊಂಡಿದೆ. ಈ ಪ್ರಶಸ್ತಿಗೆ ಶಿಫಾರಸುಗೊಳ್ಳುತ್ತಿರುವ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಮೇರಿ ಕೋಮ್​ ಅವರದ್ದಾಗಿದೆ. ಹಾಗೆಯೇ ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಗಳಿಸಿಕೊಂಡಿರುವ ಪಿ.ವಿ. ಸಿಂಧು ಅವರ ಹೆಸರು ಪದ್ಮಭೂಷಣ ಪುರಸ್ಕಾರಕ್ಕೆ ಶಿಫಾರಸುಗೊಂಡಿದೆ. 

Image result for ಪದ್ಮ ವಿಭೂಷಣ

      ಇವರ ಜೊತೆ ಕುಸ್ತಿಪಟು ವಿನೇಶ್​ ಪೊಗಾಟ್​, ಟೇಬಲ್​ ಟೆನಿಸ್​ ತಾರೆ ಮಣಿಕಾ ಭಾತ್ರಾ, ಭಾರತದ ಟಿ20 ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​, ಹಾಕಿ ತಂಡದ ನಾಯಕಿ ರಾಣಿ ರಾಮ್​ಪಾಲ್​, ಮಾಜಿ ಶೂಟಿಂಗ್​ ತಾರೆ ಸುಮಾ ಶಿರೂರು, ಪರ್ವತಾರೋಹಿ ಅವಳಿ ಸಹೋದರಿಯರಾದ ತಾಷಿ ಮತ್ತು ನಂಗ್ಶಿ ಮಲಿಕ್​ ಸೇರಿದಂತೆ 9 ಆಟಗಾರ್ತಿಯರ ಹೆಸರನ್ನು ಪದ್ಮ ಪುರಸ್ಕಾರಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ.

        ಕೇಂದ್ರ ಗೃಹ ಸಚಿವಾಲಯದಲ್ಲಿರುವ ಪದ್ಮ ಪ್ರಶಸ್ತಿಗಳ ಸಮಿತಿಗೆ ಈ ಪಟ್ಟಿಯನ್ನು ನೀಡಲಾಗಿದ್ದು, ಮುಂದಿನ ವರ್ಷದ ಗಣರಾಜ್ಯೋತ್ಸವ ದಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap