ಚಿರಂಜೀವಿ ಸರ್ಜಾ ಮೇಲೂ ಮೀಟೂ ಆರೋಪ !!!?

ಬೆಂಗಳೂರು:

 ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶೃತಿ ಹರಿಹರನ್ ಮೀಟೂ ಆರೋಪ ಮಾಡುತ್ತಿದ್ದು, ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಅವರ ಅಳಿಯ ನಟ ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಕೇಳಿ ಬರುತ್ತಿದೆ.

ನಟಿ ಸಂಗೀತಾ ಭಟ್ ಅಭಿಮಾನಿಗಳು ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಮಾಡುತ್ತಿದ್ದಾರೆ. 2017 ರಲ್ಲಿ ತೆಲುಗು ಚಿತ್ರ ‘ಕ್ಷಣಂ’ ರಿಮೇಕ್ ವೇಳೆ ಈ ಘಟನೆ ನಡೆದಿದ್ದು, ಕೆ.ಎಂ.ಚೈತನ್ಯ ನಿರ್ದೇಶನದ ಹೆಸರಿಡದ ಚಿತ್ರಕ್ಕಾಗಿ ಶೃತಿ ಹರಿಹರನ್ ಮತ್ತು ಸಂಗೀತಾ ಭಟ್ ಇಬ್ಬರನ್ನು ನಾಯಕಿರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ವೇಳೆ ತಮ್ಮ ಅನುಭವವನ್ನು ಸಂಗೀತಾ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಕಮೆಂಟ್ ಮಾಡಿದ ನಟಿಯ ಅಭಿಮಾನಿಗಳು ಚಿರಂಜೀವಿ ವಿರುದ್ಧ ಆರೋಪ ಮಾಡಿದ್ದಾರೆ.

 

 

ಆರೋಪ: 

ನಟಿ ಸಂಗೀತಾ ಭಟ್ ಇತ್ತೀಚೆಗೆ ಒಂದು ಪೋಸ್ಟ್ ಮಾಡಿದ್ದರು ಅದರಲ್ಲಿ, 2017ರಲ್ಲಿ ರೀಮೇಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದೆ. ಆದರೆ ಆ ಸಿನಿಮಾದ ನಟ ಕನ್ಯತ್ವವನ್ನು ಪ್ರಶ್ನೆ ಮಾಡಿದ್ದರು. ಆದ್ದರಿಂದ ನಾನು ಸಿನಿಮಾದಿಂದ ಹೊರಬಂದೆ ಎಂದು ಹೇಳಿದ್ದರು. ಆದರೆ ಈಗ ಅವರ ಅಭಿಮಾನಿಗಳು ಆ ಸಿನಿಮಾದ ನಟ ಚಿರಂಜೀವಿ ಆಗಿದ್ದರು. ಆದ್ದರಿಂದ ಅವರು ಈ ರೀತಿ ಪ್ರಶ್ನೆ ಮಾಡಿದ್ದಾರಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

 

ಸಂಗೀತಾ ಸ್ಪಷ್ಟನೆ:

ಈ ಆರೋಪದ ಬಗ್ಗೆ ಸಂಗೀತಾ ಭಟ್ ಫೇಸ್ ಬುಕ್ ನಲ್ಲಿ ಲೈವ್ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ಇತ್ತೀಚೆಗೆ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ನನ್ನನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳಿಗೆ ನಾನು ಪಟ್ಟಿರುವ ಕಷ್ಟ ಗೊತ್ತಾಗಲಿ ಎಂದು ಆ ಪೋಸ್ಟ್ ಹಾಕಿದ್ದೆ. ನಾನು 1 ವರ್ಷದಿಂದ ಇಂಡಸ್ಟ್ರಿಯಲ್ಲಿ ಇಲ್ಲ. ಹೀಗಾಗಿ ನಾನು ಪಬ್ಲಿಸಿಟಿಗೋಸ್ಕರ್ ಪೋಸ್ಟ್ ಮಾಡಿಲ್ಲ. ನಾನು ನನ್ನ ಜೀವನದಲ್ಲಿ ನಡೆದ ಘಟನೆಯನ್ನು ಹೇಳಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

#metoo ಬಗ್ಗೆ ಮತ್ತೆ ಮಾತನಾಡಿದ ಸಂಗೀತ ಭಟ್ -ವಿಡಿಯೋ ನೋಡಿ

 

  ನಾನು ಹಾಕಿರುವ ಪೋಸ್ಟ್ ನಲ್ಲಿ ಯಾವ ನಟ, ನಿರ್ದೇಶಕ, ನಿರ್ಮಾಪಕರ ಮೇಲೂ ಮೀಟೂ ಆರೋಪ ಮಾಡಿಲ್ಲ. ನನ್ನ ಅನುಭವನ್ನು ಹಂಚಿಕೊಂಡಿದ್ದೇನೆ ಅಷ್ಟೆ. ನಾನು ಮಾಡಿರುವ ಪೋಸ್ಟ್ ಇಟ್ಟುಕೊಂಡು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ರೀತಿ ಮಾಡಬೇಡಿ. ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap