ದೆಹಲಿ:
ಕೇಂದ್ರ ಸಚಿವ ರಾಮ್ವಿಲಾಸ್ ಪಾಸ್ವಾನ್ ಅವರ ತಮ್ಮ ಹಾಗೂ ಸಂಸದ ರಾಮಚಂದ್ರ ಪಾಸ್ವಾನ್ ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 57 ವರ್ಷ ವಯಸ್ಸಿನ ರಾಮಚಂದ್ರ ಪಾಸ್ವಾನ್ ರವರು ಲೋಕಜನಶಕ್ತಿ ಪಕ್ಷದ ನಾಯಕರಾಗಿದ್ದರು. ಬಿಹಾರದ ಸಮಷ್ಟಿಪುರದಿಂದ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಜುಲೈ 12ರಂದು ಹೃದಯಾಘಾತವಾದಾಗ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪತ್ನಿ ಸುನೈನಾ ಕುಮಾರಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ