ಬೆಂಗಳೂರು :
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿರುವಂತಹ ವ್ಯವಸ್ಥೆಯನ್ನು ನಮ್ಮ ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲೂ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೆಹಲಿಯ ಏಮ್ಸ್ ಮಾದರಿಯಲ್ಲಿ ಒಂದು ಬಾರಿ ರಕ್ತ ಪಡೆದರೆ 16ಕ್ಕೂ ಹೆಚ್ಚು ಟೆಸ್ಟ್ (ಪರೀಕ್ಷೆ )ಗಳ ವರದಿ ನೀಡುವಂತಹ ಪ್ರಯೋಗಾಲಯ ವ್ಯವಸ್ಥೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲೂ ಜಾರಿಗೊಳಿಸ ಲಾಗುವುದು. ಈ ಕುರಿತು ತಜ್ಞ ವೈದ್ಯರ ತಂಡದ ಜೊತೆ ಚರ್ಚಿಸಲಾಗುತ್ತದೆ. ಜನೌಷಧ ಕೇಂದ್ರಗಳನ್ನು ಹಲವೆಡೆ ಸ್ಥಾಪನೆ ಮಾಡಿಲ್ಲ. ಜನತೆಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಜನೌಷಧ ಕೇಂದ್ರಗಳನ್ನು ರಾಜ್ಯದಲ್ಲೆಡೆ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಬಂಧಿಕರು ಮಲಗುವುದನ್ನು ಕಂಡಿದ್ದೇನೆ, ರೋಗಿಗಳ ಸಂಬಂಧಿಕರಿಗೆ ತಂಗಲು ಜಿಲ್ಲಾಸ್ಪತ್ರೆಗಳಲ್ಲಿ ಶೆಲ್ಟರ್ ಗಳ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಜೊತೆಗೆ ಮೂಲ ಸೌಕರ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾತ್ರಿ ಊಟದ ವ್ಯವಸ್ಥೆ ಇವುಗಳನ್ನು ಸಿಎಸ್ ಆರ್ ನಿಧಿಯಿಂದ ಮಾಡಬೇಕೇ..? ಅಥವಾ ಎನ್ ಎಚ್ ಆರ್ ಎಂ ಎನ್ ಜಿಓಗೆ ನೀಡಬೇಕೇ ಎಂಬುದರ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 1,500 ವೈದ್ಯರ ಹುದ್ದೆ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
