ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯ ಅಪಹರಣ!!

ಇಸ್ಲಾಮಾಬಾದ್:

      ಸೋಮವಾರ ರಾತ್ರಿ ಸಿಂಧ್ ಪ್ರಾಂತ್ಯದ ಬದಿನ್‌ ಜಿಲ್ಲೆಯಲ್ಲಿ 16 ವರ್ಷದ ಮಾಲಾ ಕುಮಾರಿ ಮೇಘ್ವಾರ್ ಎಂಬ ಬಾಲಕಿಯ ಅಪಹರಣ ನಡೆದಿದೆ.

      ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪರಹಣ ಮಾಡಿ, ಮತಾಂತರಗೊಳಿಸಿದ ಘಟನೆ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮತ್ತೆ ಹಿಂದೂ ಬಾಲಕಿಯನ್ನು ಅಪಹರಣ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

      ನಾಲ್ವರು ದುಷ್ಕರ್ಮಿಗಳು ರಾತ್ರಿ 3 ಗಂಟೆಯ ವೇಳೆಗೆ ಮನೆಯ ಬಾಗಿಲನ್ನು ಮುರಿದು, 16 ವರ್ಷದ ಮಾಲಾ ಕುಮಾರಿ ಮೇಘ್ವಾರ್ ಎಂಬ ಬಾಲಕಿಯನ್ನು ಎತ್ತಿಕೊಂಡು ವಾಹನದಲ್ಲಿ ಹಾಕಿಕೊಂಡು ಹೋದರು ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

     ಕುರಿತು ಕೇಸು ದಾಖಲಿಸಿಕೊಳ್ಳುವಂತೆ ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಹರಿ ರಾಮ್ ಕಿಶೋರಿ ಲಾಲ್‌ ಪೊಲೀಸರಿಗೆ ಸೂಚಿಸಿದ್ದು, ಬಾಲಕಿಯನ್ನು ಕೂಡಲೇ ರಕ್ಷಿಸಿ ಸುರಕ್ಷಿತ ನೆಲೆಗೆ ಸೇರಿಸುವಂತೆ ಸಚಿವರು ಅಲ್ಪಸಂಖ್ಯಾತ ವ್ಯವಹಾರಗಳ ನಿರ್ದೇಶಕ ಮುಶ್ತಾಖ್ ಅಹ್ಮದ್‌ ಅವರಿಗೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

      ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯ ಮೇಲೆ ಪದೇ ಪದೇ ದಾಳಿಗಳಾಗುತ್ತಿದ್ದು, ಅಪಹರಣ, ಬಲವಂತದ ಮತಾಂತರ ಮತ್ತು ಹತ್ಯೆಗಳು ನಡೆಯುತ್ತಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link