‘ವಂದೇ ಭಾರತ್ ಎಕ್ಸ್ ಪ್ರೆಸ್’ ಗೆ ಚಾಲನೆ!!

ದೆಹಲಿ:

     ಪುಲ್ವಾಮ್​ ದಾಳಿಯ ದುಃಖದ ನಡುವೆಯೇ ದೇಶದ ಮೊದಲ ಎಂಜಿನ್​ ರಹಿತ ಮಧ್ಯಮ ವೇಗದ ಸ್ವದೇಶಿ ನಿರ್ಮಿತ ವಂದೇ ಭಾರತ್​ ಎಕ್ಸ್​ಪ್ರೆಸ್​ ಅಥವಾ ಟ್ರೈನ್ 18 ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

      ಇದು ಭಾರತದಲ್ಲಿ ಸದ್ಯ ಇರುವ ತೀವ್ರ ನೋವಿನ ವಾತಾವರಣದಲ್ಲಿ ಕೊಂಚ ಮನಸ್ಸಿಗೆ ನಿರಾಳತೆ ತರುವ ವಿಚಾರವಾಗಿದೆ. ಈ ಮೈಲಿಗಲ್ಲು ಸಾಧಿಸುವಲ್ಲಿ ಅವಿರತ ಶ್ರಮ ವಹಿಸಿದಂತಹ ಎಲ್ಲರಿಗೂ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು ಮತ್ತು ಈ ರೈಲಿಗೆ ಮುಂಗಡ ಬುಕ್ಕಿಂಗ್ ಸಹ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.   

ರೈಲಿನ ವಿಶೇಷತೆ:

Image result for vande mataram express modi

       97 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ರೈಲು,  1,128 ಜನರು ಪ್ರಯಾಣಿಸುವ ಈ ರೈಲಿನ ದರ ಶತಾಬ್ದಿ ರೈಲು ದರಕ್ಕಿಂತ 1.5ರಷ್ಟು ಹೆಚ್ಚಿದೆ.
      16 ಎಸಿ ಬೋಗಿಗಳು, 2 ಎಕ್ಸ್ ಕ್ಯುಟಿವ್ ಬೋಗಿಗಳಿವೆ. ಡೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿವೆ. ಎಕ್ಸ್ ಕ್ಯುಟಿವ್ ಛೇರ್ ಕಾರ್ ನಲ್ಲಿ 52 ಸೀಟುಗಳಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಪರೀಕ್ಷಾರ್ಥವಾಗಿ 160 ಕಿ.ಮೀ. ಪ್ರಯತ್ನಿಸಲಾಗುತ್ತದೆ.

ಫೈವ್ ಸ್ಟಾರ್ ಊಟ:

      ರೈಲು ಪ್ರಯಾಣದಲ್ಲಿ ಬೆಳಗ್ಗೆ ಚಹಾ ಸೇವನೆ, ಉಪಹಾರಾ ಹಾಗೂ ಲಂಚ್ ಪ್ಯಾಕೇಜಿಗೆ 399 ರು ನಿಗದಿಯಾಗಿದೆ. ಚೇರ್ ಕ್ಲಾಸ್ ನಲ್ಲಿ ಪ್ರಯಾಣಿಸುವವರು ಇದೇ ಪ್ಯಾಕೇಜಿಗೆ 344ರು ನೀಡಬೇಕಾಗುತ್ತದೆ.  ರಿಟರ್ನ್ ಜರ್ನಿಯಲ್ಲಿ ಕ್ರಮವಾಗಿ ಈ ಪ್ಯಾಕೇಜಿಗೆ 349 ರು ಹಾಗೂ 288 ರು ನಿಗದಿಯಾಗಿದೆ.

ವೇಗ-ಮಾರ್ಗ:

      ದೆಹಲಿ-ವಾರಣಾಸಿ ನಡುವೆ ಈ ರೈಲು ಪಯಣಿಸಲಿದ್ದು ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸಲಿದೆ. ಈ ರೈಲು ದೆಹಲಿಯಿಂದ ವಾರಾಣಾಸಿಗೆ 8 ಗಂಟೆಗಳಲ್ಲಿ ತಲುಪಲಿದೆ. ಕಾನ್ಪುರ ಮತ್ತು ಪ್ರಯಾಗ್​ರಾಜ್​ನಲ್ಲಿ ಮಾತ್ರ ನಿಲುಗಡೆ ಇರಲಿದೆ. ಈ ಸೆಮಿ ಹೈ ಸ್ಪೀಡ್​ ರೈಲಿನಲ್ಲಿ ಎರಡು ವಿಭಾಗದಲ್ಲಿ ಪ್ರಯಾಣಿಕರು ಟಿಕೆಟ್​ ಪಡೆದು ಪಯಣಿಸಬಹುದು. ಎಕ್ಸಿಕ್ಯೂಟೀವ್​ ಹಾಗೂ ಚೇರ್​ ಕಾರ್​ ಪ್ರಯಾಣಿಕರಿಗೆ ಹೆಚ್ಚು ಕೊಠಡಿ ಒಳಗೊಂಡ ಐಷಾರಾಮಿ ಸೌಲಭ್ಯವನ್ನು ಇದು ಹೊಂದಿದೆ.

      ಭಾರತದ್ದೇ ಬ್ರಾಂಡ್ ಆಗಿ, ಸಾರಿಗೆ ಕ್ಷೇತ್ರದಲ್ಲಿ ನೂತನ ಅಧ್ಯಾಯ ಆರಂಭಿಸಲು ‘ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ‘ ಹಳಿ ಮೇಲೆ ಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ