ದೆಹಲಿ :
ಕೌಟುಂಬಿಕ ಹಿಂಸಾಚಾರ ಮತ್ತು ಪೊಲೀಸ್ ದಾಖಲೆಗಳಿರುವ ಹಿನ್ನೆಲೆಯಲ್ಲಿ ಮೊಹಮ್ಮದ್ ಶಮಿ ಅವರಿಗೆ ವೀಸಾ ನೀಡಲು ಯುಎಸ್ ನಿರಾಕರಿಸಿದೆ.
ಭಾರತದ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ಶಮಿ ಖಾಸಗಿ ಬದುಕು ವೃತ್ತಿ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಶಮಿ ವಿರುದ್ಧ ಅವ್ರ ಪತ್ನಿ ಹಸೀನ್ ಪ್ರಕರಣ ದಾಖಲಿಸಿದ್ದಾರೆ. ಶಮಿ ಮೇಲೆ ಹಸೀನ್ ಗಂಭೀರ ಆರೋಪಗಳನ್ನು ಮಾಡಿದ್ದು, ಈಗ ಶಮಿ ಮೇಲೆ ಇದ್ರ ಪರಿಣಾಮವಾಗ್ತಿದೆ. ಈ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡ ಅಮೆರಿಕಾ ಶಮಿಗೆ ವೀಸಾ ನೀಡಲು ನಿರಾಕರಿಸಿತ್ತು.
ಆದರೆ, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಭಾರತ ತಂಡದಲ್ಲಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರಿಗೆ ಅಮೆರಿಕಾ ವೀಸಾ ಕೊಡಿಸುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಶಸ್ವಿಯಾಗಿದೆ.
ಅಮೆರಿಕಾ ವೀಸಾ ನೀಡಲು ಒಪ್ಪಿದೆ. ಶಮಿ ಅಮೆರಿಕಾ ನಂತ್ರ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಮೂರು ಏಕದಿನ ಪಂದ್ಯ ಹಾಗೂ ಎರಡು ಟಿ-20 ಪಂದ್ಯಗಳಲ್ಲಿ ಶಮಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ