ತುಮಕೂರು:
ಬೆಂಕಿ ಹಚ್ಚಿಕೊಂಡು ತಾಯಿ-ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊರಟಗೆರೆ ತಾಲೂಕಿನ ಬಿದಲೋಟಿ ಬಳಿ ನಡೆದಿದೆ.
ತಾಯಿ ರಮ್ಯಾ(23), ಮಗಳು ಬಿಂದು(4) ಗ್ರಾಮದ ಹೊರವಲಯದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ
ರಮ್ಯಾ ರವರಿಗೆ 7 ವರ್ಷದ ಹಿಂದೆ ಹೊನ್ನಾರನಹಳ್ಳಿಯ ಮಹೇಶ್ ಜತೆ ವಿವಾಹವಾಗಿತ್ತು. 15 ದಿನದಿಂದ ತವರು ಮನೆಯಲ್ಲೇ ಇದ್ದರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ