ಚಂಡೀಗಢ:
ತನ್ನ ಮಗುವನ್ನು ಕೊಂದು ನಂತರ ಶವವನ್ನು ಬೆಡ್ ಒಳಗೆ ಸುತ್ತಿಟ್ಟ ಪಾಪಿ ತಾಯಿ ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಚಂಡೀಗಢದ ಪಬುರೈಲ್ ಗ್ರಾಮದಲ್ಲಿ ನಡೆದಿದೆ.
ಮಗುವಿನ ತಂದೆ ದಶ್ ರಥ್ ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ಭಾನುವಾರ ಕೆಲಸ ಮುಗಿಸಿ ಬಂದಾಗ ಪತ್ನಿ ಮತ್ತು ಮಗು ಮನೆಯಲ್ಲಿ ಇರಲಿಲ್ಲ. ಪತ್ನಿ ಮಗುವನ್ನು ಕರೆದುಕೊಂಡು ಮಾವನ ಮನೆಗೆ ಹೋಗಿರಬೇಕೆಂದು ಯೋಚಿಸಿದ್ದಾರೆ. ನಂತರ ದಶರಥ್ ಪತ್ನಿಗೆ ಕರೆ ಮಾಡಿದಾಗ ತಾನು ಪ್ರಿಯಕರನ ಜೊತೆ ಬಂದಿರೋದಾಗಿಯೂ, ಮಗುವನ್ನು ಬೆಡ್ನಲ್ಲಿ ಸುತ್ತಿಟ್ಟಿರೋದಾಗಿಯೂ ಹೇಳಿದ್ದಾಳೆ. ಆಗ ದಶರತ್ ಹೋಗಿ ಬೆಡ್ ಬಿಡಿಸಿ ನೋಡಿದಾಗ ಮಗು ಸಾವನ್ನಪ್ಪಿರೋದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಪತಿ ತನ್ನ ಪತ್ನಿ ಮಗುವನ್ನು ಕೊಲೆ ಮಾಡಿ, ಪ್ರಿಯಕರನ ಜತೆ ಓಡಿಹೋಗಿರುವುದಾಗಿ ತಿಳಿಸಿದ್ದಾನೆ.
ಸದ್ಯ ಮಗುವಿನ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ