ಬಿಸಿಯೂಟದಲ್ಲಿ ಇಲಿ : 9 ವಿದ್ಯಾರ್ಥಿಗಳು ಅಸ್ವಸ್ಥ!!

ಲಕ್ನೋ :

      ಸರ್ಕಾರಿ ಶಾಲೆಯಲ್ಲಿ ನೀಡಿದ ಊಟದಲ್ಲಿ ಸತ್ತ ಇಲಿಯನ್ನು ಸೇರಿಸಿ ಬೇಯಿಸಲಾಗಿದ್ದು, ಊಟ ಸೇವಿಸಿದ 9 ಜನ ಮಕ್ಕಳು ಹಾಗೂ ಶಿಕ್ಷಕರು ಅಸ್ವಸ್ಥಗೊಂಡಿದ್ದಾರೆ.

       ಉತ್ತರ ಪ್ರದೇಶದ ಲಕ್ನೋ ಎಂಬಲ್ಲಿ ಈ ಘಟನೆ ನಡೆದಿದೆ. ಜನ ಕಲ್ಯಾಣ ಸಂಸ್ಥಾ ಸಮಿತಿ ಎಂಬ ಎನ್​ಜಿಒ ಇಲ್ಲಿನ ಸರ್ಕಾರ ಶಾಲೆಗೆ ಬಿಸಿಯೂಟ ಸರಬರಾಜು ಮಾಡಿದೆ. ದಾಲ್​ ತೆಗೆದುಕೊಳ್ಳುವಾಗ ನಮಗೆ ಇಲಿ ಕಾಣಿಸಿತು ಉದ್ದಿನ ಬೆಳೆಯ ಡಬ್ಬದ ತಳಭಾಗದಲ್ಲಿ ಇಲಿ ಇತ್ತು. ಇದೇ ಊಟವನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಆರನೇ ತರಗತಿ ವಿದ್ಯಾರ್ಥಿ ಶಿವಾಂಗ ತಿಳಿಸಿದ್ದಾರೆ.

      ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಶಿಕ್ಷಣ ಅಧಿಕಾರಿ ರಾಮ್​ ಸಾಗರ್​ ತ್ರಿಪಾಠಿ ಆಘಾತ ವ್ಯಕ್ತಪಡಿಸಿದ್ದು, ಇದು ಸಂಪೂರ್ಣ ನಿರ್ಲಕ್ಷ್ಯದಿಂದ ಕೂಡಿದೆ. ಈ ಕುರಿತು ಎನ್​ಜಿಒ ಮೇಲೆ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link