ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ ಮಹಿಳೆ!!

ಮಧ್ಯಪ್ರದೇಶ :

     ಸೆಲ್ಫಿ ತೆಗೆಯಲು ಹೋಗಿ 33 ವರ್ಷದ ಮಹಿಳೆಯೋರ್ವರು ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ.  

      ಮೃತ ಮಹಿಳೆಯನ್ನು ವಿದಿಷಾ ಪಟ್ಟಣದ ಕರರಿಯಾ ಪ್ರದೇಶದ ನಿವಾಸಿ ‘ಹಿಮಾನಿ ಮಿಶ್ರಾ’ ಎಂದು ಗುರುತಿಸಲಾಗಿದೆ. ಇವರು ಸೆಲ್ಫಿ ಕ್ಲಿಕ್​​ ಮಾಡುವ ವೇಳೆ ಹಲಾಲಿ ಜಲಪಾತಕ್ಕೆ ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

      ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ತಂಡ ತೆರಳಿದ್ದು, ಸುಮಾರು 16 ಗಂಟೆಯ ಬಳಿಕ ಆಕೆಯ ಶವವನ್ನು ಹೊರ ತೆಗೆಯಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ.

      ಭೋಪಾಲ್​ನಿಂದ ಕುಟುಂಬವೊಂದು ‘ಹಲಾಲಿ ಡ್ಯಾಂ’ ವೀಕ್ಷಿಸುವ ಸಲುವಾಗಿ ಬಂದಿತ್ತು. ಮಹಿಳೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನೀರು ಪಾಲಾದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೋಮ್ ಗಾರ್ಡ್ ಕಮಾಂಡೆಂಟ್ ಎಸ್​​.ಡಿ. ಪಿಳ್ಳೈ​ ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap