ಯೋಧರ ಜೊತೆ ವಾಲಿಬಾಲ್ ಆಡಿದ ಧೋನಿ : ವಿಡಿಯೋ ವೈರಲ್!!!

ಶ್ರೀನಗರ: 

    ಭಾರತೀಯ ಸೇನೆಯಲ್ಲಿ ಲೆಫ್ಟಿನೆಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಸೈನಿಕರ ಜೊತೆ ವಾಲಿಬಾಲ್ ಆಡಿರುವ ವಿಡಿಯೋ ಸಖತ್ ವೈರಲ್ ಆಗಿದೆ. 

     ಸೇನಾ ತರಬೇತಿಯಲ್ಲಿರುವ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಪ್ಯಾರಾಚೂಟ್​ ರೆಜಿಮೆಂಟ್​ನ ಲೆಫ್ಟಿನೆಂಟ್​ ಕರ್ನಲ್​ (ಗೌರವ) ಮಹೇಂದ್ರ ಸಿಂಗ್​ ಧೋನಿ ಅವರ ತರಬೇತಿ ಕುರಿತ ಹೆಚ್ಚಿನ ಮಾಹಿತಿ ಹೊರಬರುತ್ತಿಲ್ಲ. ಆದರೆ ಅವರು ಸಂಜೆಯ ವೇಳೆ ತಮ್ಮ ಯೂನಿಟ್​ನ ಯೋಧರ ಜತೆ ವಾಲಿಬಾಲ್​ ಆಡುತ್ತಿರುವ ತುಣುಕು ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


     ವಿಶ್ವಕಪ್ ಬಳಿಕ ಕ್ರಿಕೆಟ್‍ನಿಂದ 2 ತಿಂಗಳು ರಜೆ ಪಡೆದಿರುವ ಧೋನಿ ಅವರು, 106ನೇ ಟೆರಿಟೋರಿಯಲ್ ಆರ್ಮಿ ಬಟಾಲಿಯನ್ ಪ್ಯಾರಾ ಕಮಾಂಡೋ ಯುನಿಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಅವರು ಪ್ರದೇಶಿಕ ಸೇನಾ ಬೆಟಾಲಿಯನ್ ಯೋಧರೊಂದಿಗೆ ವಾಲಿಬಾಲ್ ಆಡಿದ್ದಾರೆ.

     ವಿಕ್ಟರ್​ ಫೋರ್ಸ್​ ಎಂಬ ತುಕುಡಿಯಲ್ಲಿ ಆ.15ರವರೆಗೆ ಅವರು ತರಬೇತಿ ಪಡೆಯಲಿದ್ದಾರೆ. ಪಹರೆ, ಕಾವಲು ಮತ್ತು ಸೇನಾಠಾಣೆಯಲ್ಲಿನ ಕಾರ್ಯನಿರ್ವಹಣೆ ಕುರಿತು ತರಬೇತಿ ಪಡೆಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap