ತಾತ ಆಗಿ ಬಡ್ತಿ ಹೊಂದಿದ ಮುಖೇಶ್ ಅಂಬಾನಿ!!

ಮುಂಬೈ: 

    ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರೀಗ ತಾತಾ ಆಗಿ ಬಡ್ತಿ ಹೊಂದಿದ್ದಾರೆ.

     ಹೌದು, ಮುಕೇಶ್​ ಮತ್ತು ನೀತಾ ಅಂಬಾನಿಯವರ ಮಗ ಆಕಾಶ್​ ಪತ್ನಿ ಶ್ಲೋಕಾ ಇಂದು ಇಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.  ಸದ್ಯ, ತಾಯಿ ಶ್ಲೋಕಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವುದು ತಿಳಿದುಬಂದಿದೆ. ಅಂಬಾನಿ ಕುಟುಂಬದಿಂದ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಲಾಗಿದೆ.

    ‘ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ. ನೀತಾ ಮತ್ತು ಮುಕೇಶ್ ಅಂಬಾನಿ ಅವರು ಮೊದಲ ಬಾರಿ ಅಜ್ಜ-ಅಜ್ಜಿಯಾದ ಬಗ್ಗೆ ಸಂತಸ ಪಟ್ಟಿದ್ದರೆ, ಮುಖೇಶ್ ಅವರ ತಂದೆ-ತಾಯಿಯಾಗಿರುವ  ಧೀರೂಭಾಯ್ ಮತ್ತು ಕೋಕಿಲಾ ಅಂಬಾನಿ ಅವರ ಮರಿಮೊಮ್ಮಗನನ್ನು ತುಂಬು ಸಂತೋಷದಿಂದ ಸ್ವಾಗತಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap