ತೈಲ ಮಾರುಕಟ್ಟೆಯಲ್ಲಿ ಕುಸಿತ : ಅಂಬಾನಿಗೆ ₹37,200 ಕೋಟಿ ನಷ್ಟ!!

ಮುಂಬೈ : 

     ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ತನ್ನ ನಿವ್ವಳ ಸಂಪತ್ತಿನಲ್ಲಿ 5 ಬಿಲಿಯನ್‌ ಡಾಲರ್‌ (ಸುಮಾರು 37,200 ಕೋಟಿ)ನಷ್ಟ ಅನುಭವಿಸಿದ್ದಾರೆ.

    ಸೋಮವಾರ ಷೇರುಪೇಟೆ ವಹಿವಾಟಿನಲ್ಲಿ ರಿಲಯನ್ಸ್ ಕಂಪನಿಯ ಷೇರು ಬೆಲೆ ಶೇ 8ಕ್ಕಿಂತಲೂ ಹೆಚ್ಚು ಕುಸಿದಿದೆ. ಮೇ 12ರ ನಂತರ ಇದೇ ಮೊದಲ ಬಾರಿಗೆ ಕಂಪನಿಯ ಷೇರು ಬೆಲೆ ತೀವ್ರ ಕುಸಿತ ಕಂಡಿದೆ ಹಾಗೂ ಜುಲೈ 20ರ ಕನಿಷ್ಠ ಬೆಲೆ ತಲುಪಿದೆ. ಮಧ್ಯಾಹ್ನದ ವರೆಗೂ ಶೇ 0.7ರಷ್ಟು ಇಳಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ವಹಿವಾಟು ಅಂತ್ಯದ ವೇಳೆಗೆ ಸಕಾರಾತ್ಮಕ ಅಂಶ ದಾಖಲಿಸಿದೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ಪ್ರಕಾರ, ರಿಲಯನ್ಸ್‌ ಷೇರು ಕುಸಿತದಿಂದಾಗಿ ಮಾರ್ಚ್‌ ಬಳಿಕ ಮೊದಲ ಬಾರಿಗೆ ಮುಕೇಶ್‌ ಅಂಬಾನಿ ಅವರ ಸಂಪತ್ತು ಕಡಿಮೆಯಾಗಿ 73 ಬಿಲಿಯನ್‌ ಡಾಲರ್‌ಗಳಿಗೆ ತಲುಪಿದೆ.

     ಕೋವಿಡ್–19 ನಿಯಂತ್ರಿಸುವ ನಿಟ್ಟಿನಲ್ಲಿ ಜನರು ಮನೆಯಲ್ಲಿಯೇ ಉಳಿದ ಕಾರಣ ಸಾರಿಗೆಗಾಗಿ ತೈಲದ ಬಳಕೆ ಕನಿಷ್ಠ ಮಟ್ಟ ತಲುಪಿತು. ಇದರಿಂದ ರಿಲಯನ್ಸ್‌ ತೈಲ ಸಂಸ್ಕರಣ ಘಟಕದಲ್ಲಿ ಬೇಡಿಕೆ ಕುಸಿಯಿತು.

     ಇಂಧನ ಕ್ಷೇತ್ರದಲ್ಲಿ ಅವಲಂಬನೆಯನ್ನು ಕಡಿಮೆ ಮಾಡಿ ಟೆಲಿಕಾಂ ಮತ್ತು ಇ–ಕಾಮರ್ಸ್‌ ಕ್ಷೇತ್ರಗಳಲ್ಲಿ ಉದ್ಯಮ ಬಲಗೊಳಿಸುವ ತಂತ್ರವನ್ನು ಅಂಬಾನಿ ಅನುಸರಿಸಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಕಚ್ಚಾ ತೈಲದಿಂದ ಬಳಕೆಯ ಇಂಧನದ ಸಂಸ್ಕರಣೆಯಿಂದ ಪ್ರತಿ ಬ್ಯಾರೆಲ್‌ಗೆ ಸಿಗಬಹುದಾದ ಲಾಭಾಂಶ 5.7 ಡಾಲರ್‌ಗೆ ಇಳಿಕೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap