ಮದುವೆ ವಾರ್ಷಿಕೋತ್ಸವದಲ್ಲಿದ್ದ ಮಹಿಳೆಗೆ ಶಾಕ್​… ಕೇಕ್​ ಕಟ್​ ಮಾಡಲು ಚಾಕು ಕೇಳಿದ್ರೆ ಕುತ್ತಿಗೆನೇ ಕೊಯ್ದ!

  ಹೌದು, ಮದುವೆಗೆ ಹಾಜರಾಗಲು 30 ವರ್ಷದ ಫರ್ಜಾನ ಮಿರಾತ್​ ದಕ್ಷಿಣ ಆಫ್ರಿಕದಿಂದ ಮುಂಬೈಗೆ ಬಂದಿದ್ದಾರೆ. ನಿನ್ನೆ ಫರ್ಜಾನ ಮಿರಾತ್​ರ ಮದುವೆ ವಾರ್ಷಿಕೋತ್ಸವಿತ್ತು. ತನ್ನ ತಾಯಿಯೊಡನೇ ಫರ್ಜಾನ ಹೋಟೆಲ್​ವೊಂದಕ್ಕೆ ಭೇಟಿ ನೀಡಿದ್ದಾರೆ. ಫರ್ಜಾನಾ ಹೋಟೆಲ್​ನಲ್ಲಿ ಕೇಕ್​ ಆರ್ಡರ್​ ಮಾಡಿದ್ದಾರೆ. 23 ವರ್ಷದ ವೆಯ್ಟರ್​  ನಿಶಾಂತ್​ ಗೌಡ ಕೇಕ್ ತಂದು ಕೊಟ್ಟಿದ್ದಾನೆ.

  ಇನ್ನು ಕೇಕ್​ ಕಟ್​ಮಾಡಲು ಫರ್ಜಾನಾ ಚಾಕು ಕೇಳಿದ್ದಾರೆ. ಇದರಿಂದ ಕೋಪಗೊಂಡ ನಿಶಾಂತ್​ ಚಾಕು ತಂದು ಫರ್ಜಾನಾ ಕುತ್ತಿಗೆ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ಫರ್ಜಾನಾ ಶಾಕ್​ ಆಗಿದ್ದಾರೆ.  ಈ ಮಧ್ಯೆ ಫರ್ಜಾನ ಅವರನ್ನ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link