ಸಿಟಿ ಸೆಂಟರ್ ಮಾಲ್ ನಲ್ಲಿ 36 ಗಂಟೆ ಕಳೆದರೂ ಆರದ ಬೆಂಕಿ!!!

ಮುಂಬೈ :

    ಮುಂಬೈ ಸಿಟಿ ಸೆಂಟರ್‌ ಮಾಲ್‌ನಲ್ಲಿ ಗುರುವಾರ ರಾತ್ರಿ ಬೆಂಕಿ ಅವಘಢ ಸಂಭವಿಸಿ 36 ಗಂಟೆ ಕಳೆದರೂ ಇನ್ನು ಬೆಂಕಿ ಆರಿಲ್ಲ.

     ಗುರುವಾರ ರಾತ್ರಿ 8.50ಕ್ಕೆ ಮಾಲ್‌ನ ಎರಡನೇ ಅಂತಸ್ತಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಮಾಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಆರಂಭದಲ್ಲಿ ಲೆವಲ್‌-1( ಮೈನರ್‌) ಎಂದು ಪರಿಗಣಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ ಬಳಿಕ ಬೆಂಕಿ ಇತರೆ ಸ್ಥಳಗಳಿಗೂ ಹರಡಿದ್ದರಿಂದ ರಾತ್ರಿ 10.45 ಕ್ಕೆ ಬೆಂಕಿಯ ಪ್ರಮಾಣ ಲೆವಲ್‌-3 ಮತ್ತು ಬೆಳಿಗ್ಗೆ 2.30ಕ್ಕೆ ಲೆವಲ್‌-4 ತನಕ ತಲುಪಿತ್ತು ಎಂದು ಮಾಹಿತಿ ಸಿಕ್ಕಿದೆ.

    ಕಳೆದ 36 ಗಂಟೆಗಳಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಈ ಕಾರ್ಯಾಚರಣೆಯಲ್ಲಿ 18 ಅಗ್ನಿಶಾಮಕ ಯಂತ್ರ ಮತ್ತು 10 ಜಂಬೋ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ. ಬೆಂಕಿ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್‌ ಪಕ್ಕದ ಕಟ್ಟಡದಿಂದ ಸುಮಾರು 3500 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

     ಬೆಂಕಿ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್‌ ಪಕ್ಕದ ಕಟ್ಟಡದಿಂದ ಸುಮಾರು 3500 ಜನರನ್ನು ಸ್ಥಳಾಂತರಿಸಲಾಗಿದೆ.

     ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳದ ಐವರು ಸಿಬ್ಬಂದಿಗೆ ಗಾಯಗಳಾಗಿದ್ದವು. ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap