ಪಾಕ್ LETಯಿಂದ ಮುಂಬೈ ನ 2 ತಾಜ್ ಹೊಟೇಲ್ ಗೆ ಬೆದರಿಕೆ ಕರೆ!!

ಮುಂಬೈ:Taj Hotels in Mumbai Receive Bomb Threat Call 'from Pakistan ...

     ವಾಣಿಜ್ಯ ನಗರಿ ಮುಂಬೈಯ ತಾಜ್ ಹೋಟೆಲ್ ಹಾಗೂ ಕೊಲಾಬಾದಲ್ಲಿರುವ ತಾಜ್​ ಮಹಲ್​ ಪ್ಯಾಲೇಸ್​ ಹೊಟೆಲ್ ಮೇಲೆ ಬಾಂಬ್ ಬೆದರಿಕೆ ಕರೆ ಬಂದಿದೆ. 

     ಸೋಮವಾರ ತಡರಾತ್ರಿ 12-30ರ ವೇಳೆಯಲ್ಲಿ  ಕರಾಚಿಯಿಂದ ಕರೆ ಬಂದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಮೊದಲು ಮಧ್ಯರಾತ್ರಿ 12.30ಯಷ್ಟರಲ್ಲಿ ತಾಜ್​ ಮಹಲ್​ ಪ್ಯಾಲೇಸ್​​ಗೆ ಕರೆ ಬಂದಿದೆ. ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿ ಅದನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ತಾನು ಎಲ್​ಇಟಿಗೆ ಸೇರಿದ ಉಗ್ರ, ತಾಜ್ ಹೊಟೆಲ್​ನ್ನು ಸರ್ವನಾಶ ಮಾಡುತ್ತೇವೆ. 2008ರಲ್ಲಿ ನಡೆಸಿದ್ದಂತಹ ದಾಳಿಯನ್ನು ಇನ್ನೊಮ್ಮೆ ನಡೆಸುತ್ತೇವೆ ಎಂದು ಹೇಳಿದ್ದಾನೆ. ಅದಾದ ಬಳಿಕ ಎರಡನೇ ಕರೆಯನ್ನು ಬಾಂದ್ರಾದಲ್ಲರಿಉವ ತಾಜ್​ ಲ್ಯಾಂಡ್​ ಎಂಡ್​ ಹೋಟೆಲ್​ಗೆ ಮಾಡಿ, ನಾನು ಪಾಕಿಸ್ತಾನದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡು, ದಾಳಿಯ ಬೆದರಿಕೆ ಹಾಕಿದ್ದಾನೆ. 

Hotel The Taj Mahal Palace, Mumbai, India - Booking.com

      ಎರಡೂ ಕರೆಗಳೂ ಒಂದೇ ನಂಬರ್​​ನಿಂದ ಬಂದಿವೆ. ಸದ್ಯ ಕರೊನಾ ವೈರಸ್​ನಿಂದಾಗಿ ಎರಡೂ ಹೋಟೆಲ್​ಗಳೂ ಕಾರ್ಯ ನಿರ್ವಹಿಸುತ್ತಿಲ್ಲ.  ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದಂತೆಯೇ ಹೋಟೆಲ್ ಹೊರಗಡೆ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap