ವಿಶಾಖಪಟ್ಟಣಂ:
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವರಿಷ್ಠ , ಮಾಜಿ ಮುಖ್ಯಮಂತ್ರಿ ವೈ.ಎಸ್. ಆರ್. ಪುತ್ರಜಗನ್‍ಮೋಹನ್ ರೆಡ್ಡಿ ದುಷ್ಕರ್ಮಿಯೋರ್ವ ಚಾಕುವಿನಿಂದ ಇರಿದಿರುವ ಘಟನೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಏರ್ಪೋರ್ಟ್ಗೆ ಆಗಮಿಸಿ ಲಾಂಜ್ನಲ್ಲಿ ಕುಳಿತಿದ್ದ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಜೊತೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಂದ ಯುವಕ ಭುಜಕ್ಕೆ ಇರಿದ್ದಾನೆ. ಜಗನ್ ಅವರಿಗೆ ಏರ್ಪೋರ್ಟ್ನಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿಯನ್ನು ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ಹಲ್ಲೆಗೊಳಗಾದ ಜಗನ್‍ಮೋಹನ್ ರೆಡ್ಡಿಗೆ ಏರ್‍ಪೋರ್ಟ್‍ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ರೆಡ್ಡಿ ಅವರು ಹೈದರಾಬಾದ್‍ಗೆ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ