ಮೈಸೂರು:
“ನನ್ನ ತಲೆಗೆ ವಿದ್ಯೆ ಹತ್ತುತ್ತಿಲ್ಲ. ನಾನೊಬ್ಬಳು ಡಲ್ ಸ್ಟೂಡೆಂಟ್” ಎಂದು ಫೇಸ್ ಬುಕ್ ಲೈವ್ ಮಾಡಿ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕಾವೇರಿ ನಗರದಲ್ಲಿ ನಡೆದಿದೆ. ಯಾಸ್ಮಿನ್ ತಾಜ್(18) ಸಾವಿಗೀಡಾದಾಕೆ. ನಗರದ ಜೆಎಸ್ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದಳು.
ಜನವರಿ 10ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮಾತ್ರೆ ಸೇವಿಸಿದ್ದಾಳೆ. ನಂತರ ಆಕೆಯನ್ನು ಸ್ಥಳೀಯ ಸೇಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯರಾತ್ರಿ ವೇಳೆ ಯಾಸ್ಮಿನ್ ಮೃತಪಟ್ಟಿದ್ದಾಳೆ.
“ಬದುಕಿದ್ದಾಗ ನನ್ನನ್ನು ಯಾರೂ ಲೈಕ್ ಮಾಡಿಲ್ಲ. ಸಾಯುವ ವಿಡಿಯೋನಾದ್ರೂ ಲೈಕ್ ಮಾಡಿ ಶೇರ್ ಮಾಡಿ. ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಳು ಅಂತ ಪ್ರಪಂಚಕ್ಕೆ ತಿಳಿಸಬೇಕು” ಎಂದು ಆತ್ಮಹತ್ಯೆಗೂ ಮುನ್ನ ಫೇಸ್ ಬುಕ್ ಲೈವ್ ನಲ್ಲಿ ತೆಲುಗಿನಲ್ಲಿ ಯಾಸ್ಮಿನ್ ಹೇಳಿದ್ದಾಳೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ