ಮೈಸೂರು ವಿಶ್ವವಿದ್ಯಾನಿಲಯ 2020 ರ ವೇಳೆಗೆ ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲೆದೆ!!

ಮೈಸೂರು:

   ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಕನಸಿಗೆ ಪೂರಕವಾಗಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಡಿಜಿಟಲ್ ಯೂನಿವರ್ಸಿಟಿಯಾಗುವತ್ತ ದಾಪುಗಾಲು ಇರಿಸಿದೆ. ರಾಜ್ಯದ ಪ್ರಪ್ರಥಮ ವಿಶ್ವವಿದ್ಯಾನಿಲಯವೆಂಬ ಪ್ರತಿಷ್ಠೆ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯ 2020 ರ ವೇಳೆಗೆ ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟಿದೆ.

   ಕೇಂದ್ರ ಸರ್ಕಾರವು ‘ಡಿಜಿಟಲ್‌ ಇಂಡಿಯಾ’ ಅಭಿಯಾನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಾಣಿಕೆಯೂ ಇರಬೇಕು ಎಂಬ ಆಶಯ ಇದರಲ್ಲಿ ಅಡಗಿದೆ. ಶೈಕ್ಷಣಿಕ, ಆಡಳಿತ, ಪ್ರಕಟಣ ವಿಭಾಗಗಳು ಸೇರಿದಂತೆ ವಿ.ವಿ.ಯ ಎಲ್ಲ ಪ್ರಕ್ರಿಯೆಗಳನ್ನು ಆನ್‌ಲೈನ್‌ ಮೂಲಕವೇ ನಡೆಸುವಂತೆ ಸಿದ್ಧತೆ ನಡೆಸಬೇಕಿದೆ ಎಂದು ಪ್ರಸ್ತಾಪಿಸಲಾಯಿತು.

    ಕುಲಪತಿ ಪ್ರೊ.ಹೇಮಂತಕುಮಾರ್‌ ಮಾತನಾಡಿ,  ಆಡಳಿತದ ಪ್ರತಿ ಹಂತವನ್ನೂ ‘ಇ ಪದ್ಧತಿ’ಗೆ ಅಳವಡಿಸಿಕೊಳ್ಳುವ ಯೋಜನೆ ಇದಾಗಲಿದೆ. ಗುಮಾಸ್ತರಿಂದ ಹಿಡಿದು, ಉಪ ಕುಲಸಚಿವ, ಕುಲಸಚಿವ, ಕುಲಪತಿಯವರೆಗೂ ಕಾಗದ ರಹಿತ ಆಡಳಿತ ನಡೆಸುವುದು ಇದರ ಸ್ವರೂಪವಾಗಲಿದೆ. ಇಷ್ಟೇ ಅಲ್ಲದೇ, ಶೈಕ್ಷಣಿಕ ಹಂತದಲ್ಲೂ ಶಿಕ್ಷಕರು, ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಪ್ರತಿಕ್ರಿಯಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದರು. ಮೈಸೂರು ವಿವಿಯ ಮಾನಸಗಂಗೋತ್ರಿ ಕ್ಯಾಂಪಸ್ ನಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣದ ಜತೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಇ-ಕಾರ್ಟ್ ‘ ವ್ಯವಸ್ಥೆ ಜಾರಿಗೂ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap