ನಾಸಿಕ್ :
ನೋಟು ಮುದ್ರಣ ಘಟಕಗಳಲ್ಲಿ ಒಂದಾಗಿರುವ ನಾಸಿಕ್‌ನ ಶಾಖೆಯಲ್ಲಿ 40 ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಘಟಕವನ್ನು ಸ್ಥಗಿತಗೊಳಿಸಲಾಗಿದೆ.
ದೇಶದಾದ್ಯಂತ ಕೊರೊನಾ ಮಹಾಮಾರಿ ರಣಕೇಕೆ ಹಾಕ್ತಿದೆ. ಇತ್ತಾ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ನೋಟು ಮುದ್ರಣ ಘಟಕ (ಸಿಎನ್‌ಪಿ) ಮತ್ತು ಭಾರತೀಯ ಸೆಕ್ಯುರಿಟಿ ಪ್ರೆಸ್(ಐಎಸ್‌ಪಿ) ಘಟಕದಲ್ಲಿ ಕಳೆದ ಎರಡು ವಾರಗಳಿಂದ 40 ಉದ್ಯೋಗಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ 2 ಘಟಕಗಳ ಕಾರ್ಯವನ್ನ ಇಂದಿನಿಂದ 4 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ನೋಟು ಮುದ್ರಣ ಘಟಕದಲ್ಲಿ 2300 ಖಾಯಂ ಉದ್ಯೋಗಿಗಳು, ಸೆಕ್ಯುರಿಟಿ ಪ್ರೆಸ್‌ನಲ್ಲಿ 1700 ಖಾಯಂ ಉದ್ಯೋಗಿಗಳಿದ್ದು, ಇಲ್ಲಿ ಹಲವು ವಿಧದ ನೋಟುಗಳೂ ಸೇರಿ 17 ಲಕ್ಷ ಕರೆನ್ಸಿ ನೋಟುಗಳು, ಸೆಕ್ಯುರಿಟಿ ಪ್ರೆಸ್ ರೆವಿನ್ಯು ಸ್ಟ್ಯಾಂಪ್‌ಗಳು, ಸ್ಟ್ಯಾಂಪ್ ಪೇಪರ್, ಪಾಸ್‌ಪೋರ್ಟ್ ಮತ್ತು ವೀಸಾಗಳನ್ನು ಮುದ್ರಿಸುತ್ತದೆ.
ಈ ಘಟಕಗಳಲ್ಲಿ 3 ತಿಂಗಳಿಂದ ಸುಮಾರು 125 ಉದ್ಯೋಗಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮುದ್ರಣ ಕಾರ್ಯ ಈ 4 ದಿನಗಳು ಸ್ಥಗಿತಗೊಳಿಸುವುದ್ರಿಂದ ಸುಮಾರು 6.8 ಕೋಟಿ ಕರೆನ್ಸಿ ನೋಟುಗಳ ಉತ್ಪಾದನಾ ನಷ್ಟ ಉಂಟಾಗಲಿದೆ. ಇದನ್ನ ಭಾನುವಾರವೂ ಕೆಲಸ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ