ನವದೆಹಲಿ:
ಈ ಬಾರಿಯೂ ದೇಶ ಕಾಯುತ್ತಿರುವ ಸೇನೆಯ ಯೋಧರೊಂದಿಗೆ ದೀಪಾವಳಿ ಆಚರಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟ್ವಿಟರ್ನಲ್ಲಿ ಇಸ್ರೇಲ್ ಪ್ರಧಾನಿ ಕೋರಿರುವ ದೀಪಾವಳಿ ಶುಭಾಶಯಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿವರ್ಷ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಯೋಧರೊಂದಿಗೆ ಕಾಲ ಕಳೆಯುತ್ತೇನೆ. ಈ ಬಾರಿಯೂ ಸಾಹಸಿ ಯೋಧರೊಂದಿಗೆ ವಿಶೇಷವಾಗಿ ಕಾಲ ಕಳೆಯುವುದಾಗಿ ಹೇಳಿದ್ದಾರೆ.
Bibi, my friend, thank you so much for the Diwali wishes.
Every year, I visit our border areas and surprise our troops. This year too, will spend Diwali with our brave troops. Spending time with them is special.
I will share photos of the same tomorrow evening. 🙂 @netanyahu https://t.co/gnouOA3QGt
— Narendra Modi (@narendramodi) November 6, 2018
ದೀಪಾವಳಿ ಶುಭಾಶಯ ಕೋರಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹುಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಈ ವೇಳೆ ತೆಗೆದ ವಿಶೇಷ ಭೇಟಿಯ ಫೋಟೋಗಳನ್ನೂ ಶೇರ್ ಮಾಡುವುದಾಗಿ ಮೋದಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಹಿಂದೂ ಧರ್ಮೀಯರ ಪವಿತ್ರ ಕ್ಷೇತ್ರವಾಗಿರುವ ಗಂಗೋತ್ರಿಗೆ ಹೋಗುವ ದಾರಿಯಲ್ಲಿರುವ, ಭಾಗೀರತಿ ನದಿಯ ದಡದಲ್ಲಿರುವ, ಉತ್ತರಕಾಶಿ ಜಿಲ್ಲೆಯ ಎಂಬ ಗ್ರಾಮದಲ್ಲಿ, ದೇಶವನ್ನು ಕಾಪಾಡುತ್ತಿರುವ ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೀಪಾವಳಿಯ ದೀಪ ಬೆಳಗಲಿದ್ದಾರೆ.
ಉತ್ತರಾಖಂಡ್ ನ ಗಡಿಯಲ್ಲಿರುವ ದೂರದ ಗ್ರಾಮ ಹರ್ಶಿಲ್ ಗೆ ನರೇಂದ್ರ ಮೋದಿಯವರು ಈಗಾಗಲೆ ಆಗಮಿಸಿದ್ದು, ಸೇನೆಯ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಅವರು ಈಗಾಗಲೆ ಅಲ್ಲಿಗೆ ತಲುಪಿದ್ದಾರೆ.
“ದೂರದ ಹಿಮಾಚ್ಛಾದಿತ ಪ್ರದೇಶದಲ್ಲಿ ದೇಶದ ಗಡಿಯನ್ನು ಕಾಯುವ ನಿಮ್ಮ ಶ್ರದ್ಧೆ ಇಡೀ ದೇಶಕ್ಕೆ ನವಚೈತನ್ಯವನ್ನು ನೀಡುತ್ತದೆ ಮತ್ತು 125 ಕೋಟಿ ಭಾರತೀಯರ ಭವಿಷ್ಯ ಮತ್ತು ಕನಸನ್ನು ಸಂರಕ್ಷಿಸುತ್ತಿದೆ” ಎಂದು ಸಂದೇಶ ನೀಡಿದ್ದಾರೆ.
2014ರಲ್ಲಿ ಪ್ರಧಾನಿಯಾದ ನಂತರ ನರೇಂದ್ರ ಮೋದಿ, ಸಿಯಾಚಿನ್ ನಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. 2015ರಲ್ಲಿ ಪಂಜಾಬ್ ಗಡಿ ಪ್ರದೇಶದಲ್ಲಿ ದೀಪಾವಳಿ ಆಚರಿಸಿದ್ದರು. 2016ರಲ್ಲಿ ಹಿಮಾಚಲ ಪ್ರದೇಶದ ಇಂಡೋ- ಟಿಬೆಟಿನ್ ಗಡಿ ಪೊಲೀಸರೊಂದಿಗೆ ಕಾಲ ಕಳೆದಿದ್ದ ನರೇಂದ್ರ ಮೋದಿ, 2017ರಲ್ಲಿ ಜಮ್ಮು- ಕಾಶ್ಮೀರದ ಗುರೇಜ್ ಬಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
