ನಕ್ಸಲರ ಅಟ್ಟಹಾಸ : ರಸ್ತೆ ಕಾಮಗಾರಿ ವಾಹನಗಳಿಗೆ ಬೆಂಕಿ!!

ಛತ್ತೀಸ್​​​ಗಢ :

      ರಸ್ತೆ ಕಾಮಗಾರಿ ನಡೆಸುತ್ತಿದ್ದ ವಾಹನಗಳು ಮತ್ತು ಯಂತ್ರಗಳಿಗೆ ನಕ್ಸಲರು ಬೆಂಕಿಯಿಟ್ಟಿರುವ ಘಟನೆ ಛತ್ತೀಸಗಢ ಬಿಜಾಪುರ್​ ಜಿಲ್ಲೆಯಲ್ಲಿ ನಡೆದಿದೆ.

      ಛತ್ತೀಸ್​​​ಗಢದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಘಟನೆಯಲ್ಲಿ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರನನ್ನು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲ. ಬಿಜಾಪುರ್​ ಜಿಲ್ಲೆಯ ತುಮ್ನಾರ್​ ಮತ್ತು ಕೊಯಿಟ್‌ಪಾಲ್ ಗ್ರಾಮದ ನಡುವೆ ಪ್ರಧಾನ ಮಂತ್ರಿ ಗ್ರಾಮ ಸಡಕ್​ ಯೋಜನೆಯ ರಸ್ತೆ ಕಾಮಗಾರಿ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

      ಛತ್ತೀಸ್ ಗಡ ರಾಜಧಾನಿಯಿಂದ 450 ಕಿ.ಮೀ ಮತ್ತು ಬಿಜಾಪುರ್​ ನಗರದಿಂದ 7 ಕಿ.ಮೀ ದೂರದಲ್ಲಿ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿರುವುದಕ್ಕೆ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದ ನಕ್ಸಲರು ಕಾರ್ಮಿಕರಿಗೆ ಬೆದರಿಕೆ ಒಡ್ಡುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap