ಮಹಾರಾಷ್ಟ್ರ :
ಮಾವೋವಾದಿಗಳು ನಾಲ್ಕು ಟ್ರಕ್‌ಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ.
ನಕ್ಸಲ್ ಗುಂಪಿನಲ್ಲಿದ್ದ ಕುಖ್ಯಾತ ಮಹಿಳೆ ಸ್ರುಜನಕ್ಕ ಎಂಬುವಳನ್ನು ಮೇ 1 ರಂದು ಪೊಲೀಸರು ಕಾರ್ಯಾಚರಣೆ ವೇಳೆ ಹೊಡೆದುರುಳಿಸಿದ್ದರು. ತಮ್ಮ ಸಹಚರ ಮಹಿಳೆಯೊಬ್ಬಳನ್ನು ಪೊಲೀಸರು ಬೇಟೆಯಾಡಿರುವ ಬೆನ್ನಲ್ಲೇ ನಕ್ಸಲರು ಈ ದುಷ್ಕೃತ್ಯ ಎಸಗಿದ್ದಾರೆ.
ಸಾವರ್ಗಾಂವ್ – ಮುರುಮ್ಗಾಂವ್ ರಸ್ತೆಯಲ್ಲಿ ಈ ದಾಳಿ ನಡೆಸಿದ್ದಾರೆ ಎಂದು ಗಡ್ಚಿರೋಲಿ ಎಸ್ಪಿ ಮಾಹಿತಿ ನೀಡಿದ್ದಾರೆ. ಈ ಬಂಡುಕೋರರು ಧನೋರಾ ತಾಲೂಕಿನ ರಸ್ತೆ ಬಂದ್ ಮಾಡಿದ್ದರು. ಈ ವೇಳೆ ನಾಲ್ಕು ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ